2024ರ ಲೋಕಸಭಾ ಚುನಾವಣೆಗೆ ತಯಾರಿ, ಕೇಂದ್ರ ಸಚಿವರಿಗೆ ಬಿಜೆಪಿ ಪಕ್ಷದ ಜವಾಬ್ದಾರಿ!
2024ರ ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದೆ. ಜುಲೈ 2 ರಂದು ಮಂತ್ರಿ ಮಂಡಲ ಸಭೆ ಕರೆಯಲಾಗಿದ್ದು, ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಹಲವು ಸಚಿವರನ್ನು ಸಂಪುಟದಿಂದ ಹೊರಗಿಟ್ಟು ಪಕ್ಷದ ಜವಾಬ್ದಾರಿ ನೀಡಲು ಬಿಜೆಪಿ ಮುಂದಾಗಿದೆ.
ನವದೆಹಲಿ(ಜೂ.30) ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದೆ. ಜುಲೈ 2 ರಂದು ಮಹತ್ವದ ಮಂತ್ರಿ ಮಂಡಲ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸಂಪುಟ ಪುನಾರಚನೆ ಮಾಡುವ ತಯಾರಿ ನಡೆಯಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ವೇಳೆ ಹಲವು ಸಚಿವರನ್ನು ಪಕ್ಷದ ಕಾರ್ಯಕ್ಕಾಗಿ ಸಂಪುಟದಿಂದ ಹೊರಗಿಡಲು ಚರ್ಚೆ ನಡೆಯುತ್ತಿದೆ. ಹೊಸಬರಿಗೆ ಮೋದಿ ಸಂಪುಟದಲ್ಲಿ ಸ್ಥಾನ ನೀಡಲು ಬಿಜೆಪಿ ಮುಂದಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗುತ್ತದೆ.