Party Rounds: ದಕ್ಷಿಣ ಕನ್ನಡದ 3 ಕ್ಷೇತ್ರಗಳಲ್ಲಿ ಬಿಜೆಪಿಗೆ ತಲೆಬಿಸಿ; ಇಲ್ಲಿದೆ ಡೀಟೇಲ್ಸ್!

ಕರ್ನಾಟಕ ವಿಧಾನಸಭೆಗೆ ಚುನಾವಣೆ ಸಮೀಪವಾಗುತ್ತಿರುವಂತೆ ದಕ್ಷಿಣ ಕನ್ನಡದ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿಗೆ ತಲೆಬಿಸಿ ಶುರುವಾಗಿದೆ. ಹಾಗಿದ್ದರೆ ಈ ಕ್ಷೇತ್ರ ಯಾವುದು ಎನ್ನುವುದರ ಡೀಟೇಲ್ಸ್‌ ಇಲ್ಲಿದೆ.
 

First Published Feb 23, 2023, 8:26 PM IST | Last Updated Feb 23, 2023, 8:26 PM IST

ಬೆಂಗಳೂರು (ಫೆ.23): ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ನಡುವೆ ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಹೇಗೆ ಎನ್ನುವ ಲೆಕ್ಕಾಚಾರದಲ್ಲಿ ನಿರತವಾಗಿದೆ. ಈ ನಡುವೆ ದಕ್ಷಿಣ ಕನ್ನಡದ ಮೂರು ಕ್ಷೇತ್ರಗಳ ವಿಚಾರಕ್ಕೆ ಬರೋದಾದರೆ, ಈ ಕ್ಷೇತ್ರಗಳಲ್ಲಿ ಬಿಜೆಪಿ ತಲೆಬಿಸಿ ಜೋರಾಗಿದೆ.

ಪುತ್ತೂರು, ಸುಳ್ಯ ಹಾಗೂ ಉಳ್ಳಾಲದಲ್ಲಿ ಬಿಜೆಪಿಗೆ ಟಿಕೆಟ್‌ ಟೆನ್ಶನ್‌ ಶುರುವಾಗಿದೆ. ಈ ಪ್ರದೇಶದಲ್ಲಿ ಆಕಾಂಕ್ಷಿಗಳ ಪಟ್ಟಿ ಜೋರಾಗಿರುವುದರೊಂದಿಗೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿ ಶಾಸಕರ ವಿರುದ್ಧವೇ ಆಕ್ರೋಶ ಹೆಚ್ಚಿದೆ. ಪುತ್ತೂರು, ಸುಳ್ಯದಲ್ಲಿದಲ್ಲಿ ಬಿಜೆಪಿ ಶಾಸಕರ ವಿರುದ್ಧ ಅಸಮಾಧಾನವಿದ್ದು, ಬಿಜೆಪಿಯ ಬದಲು ಹಿಂದು ನಾಯಕರಿಗೆ ಟಿಕೆಟ್‌ ಕೊಡುವಂತೆ ಒತ್ತಾಯ ಜೋರಾಗಿದೆ.

ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್

ಆಕಾಂಕ್ಷಿಗಳು ಹೆಚ್ಚಾದ ಹಿನ್ನಲೆಯಲ್ಲಿ ಆರ್‌ಎಸ್ಎಸ್‌ನಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಈಗಾಗಲೇ ವಿಸ್ತಾರಕರಿಂದ ಸಮೀಕ್ಷೆ ನಡೆಸುವಂತೆ ತಿಳಿಸಲಾಗಿದೆ. ಈ ವರದಿಯನ್ನು ಆರೆಸ್ಸೆಸ್ ಸ್ವತಃ ಹೈಕಮಾಂಡ್‌ಗೆ ನೀಡಲಿದೆ.