Asianet Suvarna News Asianet Suvarna News

Party Rounds: ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿಂದು ನಡೆದದ್ದೇನು ಗೊತ್ತಾ?

ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಇಂದು ಸಭೆಯನ್ನು ಕರೆಯಲಾಗಿತ್ತು. ಬಿಜೆಪಿಯ ಡ್ಯಾಮೇಜ್ ಕಂಟ್ರೋಲ್ ಸಭೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ.

First Published Jun 30, 2023, 8:24 PM IST | Last Updated Jun 30, 2023, 8:24 PM IST

ಬೆಂಗಳೂರು (ಜೂ.30): ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಇಂದು ಸಭೆಯನ್ನು ಕರೆಯಲಾಗಿತ್ತು. ಬಿಜೆಪಿಯ ಡ್ಯಾಮೇಜ್ ಕಂಟ್ರೋಲ್ ಸಭೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಬಿಜೆಪಿ ಹೈಕಮಾಂಡ್ ಶಿಸ್ತಿನ ಗೆರೆ ಅಳಿಸಿ ಹೋಗದಂತೆ ತಡೆಯಬೇಕೆಂಬ ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ಇಂದು ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ ಒಳಗೊಂಡ ಐವರು ನಾಯಕರ ನೇತೃತ್ವದಲ್ಲಿ ವಿವರಣೆ ಪಡೆದು ಎಚ್ಚರಿಕೆ ಕೊಡುವ ಸಭೆ ನಡೆಸಿದರು. ಬಹಿರಂಗವಾಗಿ ಮಾತನಾಡಿದ್ದ 11 ಮಂದಿಗೆ ಸಭೆಗೆ ನೋಟಿಸ್ ನೀಡಿದರು. ಆದರೆ ಬಂದಿದ್ದು ಮಾತ್ರ 6 ಜನ. ರೇಣುಕಾಚಾರ್ಯ ಸೇರಿದಂತೆ ಉಳಿದ ಐವರು ಸಭೆಗೆ ಗೈರಾಗಿದ್ದರು. ಎಲ್ಲರನ್ನು ಕರೆಸಿ ಮಾತನಾಡಿದ್ದು, ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಬಿಜೆಪಿ ನಾಯಕರು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories