Asianet Suvarna News Asianet Suvarna News

ಲೋಕಸಭೆ ಸಮರಕ್ಕೂ ಮುನ್ನ ಕಾಂಗ್ರೆಸ್‌ನಿಂದ ಆಪರೇಶನ್ ಹಸ್ತ?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 20 ಸ್ಥಾನ ಗೆಲ್ಲುವ ಗುರಿ ಹೊಂದಿದ್ದು, ಚುನಾವಣೆಗೂ ಮುನ್ನವೇ ಆಪರೇಷನ್‌ ಹಸ್ತ ಮಾಡಲು ಮುಂದಾಗಿದೆ.

ಬೆಂಗಳೂರು (ಜು.10): ಲೋಕಸಭೆಯಲ್ಲಿ ಕನಿಷ್ಠ 20 ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ರಣತಂತ್ರ ಹೆಣೆದಿದ್ದು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಗೆ ಕಾಂಗ್ರೆಸ್​ ನಾಯಕರು ಗಾಳ ಹಾಕಿದ್ದಾರೆ. ಈ ಮೂಲಕ ಈಗಿರುವ ಹುದ್ದೆಯಲ್ಲಿಯೇ ಜಯಪ್ರಕಾಶ್‌ ಹೆಗ್ಡೆಯವರನ್ನು ಮುಂದುವರೆಸಿ ಆಪರೇಶನ್‌ ಹಸ್ತ ಮಾಡಲು ಮುಂದಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲು ಒಪ್ಪಿಗೆ ಕೂಡ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಅಧ್ಯಕ್ಷರ ಅವಧಿ ವಿಸ್ತರಣೆಯ ಅಭಯ ನೀಡಲಾಗಿದೆ. ಈ ಮೂಲಕ ಜಯಪ್ರಕಾಶ್ ಹೆಗ್ಡೆ ಪರವಾಗಿ ಸಿದ್ದು ಸರ್ಕಾರದ ಸಾಫ್ಟ್ ಕಾರ್ನರ್ ತೋರಿಸಿದ್ದು, ಕಾಂಗ್ರೆಸ್​ ಪಕ್ಷಕ್ಕೆ ಸೆಳೆದು ಲೋಕಸಭಾ ಟಿಕೆಟ್ ನೀಡಲು ಪ್ಲ್ಯಾನ್ ಮಾಡಿದೆ.

ಕಾಂಗ್ರೆಸ್‌ನತ್ತ ಜಯಪ್ರಕಾಶ್ ಹೆಗ್ಡೆ ಚಿತ್ತ: ಲೋಕಸಭೆಗೆ ಕಣಕ್ಕಿಳಿಯಲು ರಣತಂತ್ರ

2023ರಲ್ಲಿ ಚುನಾವಣೆಯಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಿದೆ. 2023ರಲ್ಲಿ ಚಿಕ್ಕಮಗಳೂರಿನ 5 ಕ್ಷೇತ್ರದಲ್ಲೂ ಕಾಂಗ್ರೆಸ್​ಗೆ ಜಯವಾಗಿದೆ. ಇನ್ನು ಉಡುಪಿಯ 5 ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಚಿಕ್ಕಮಗಳೂರಿನ 4, ಉಡುಪಿಯ 4 ಕ್ಷೇತ್ರ ಸೇರಿ 1 ಲೋಕಸಭಾ ಕ್ಷೇತ್ರವಾಗಿದೆ. ಹೀಗಾಗಿ, ಕಾಂಗ್ರೆಸ್​ನ 4 ಶಾಸಕರು, ಬಿಜೆಪಿಯ 4 ಶಾಸಕರ ಮಧ್ಯೆ ಹೋರಾಟ ಶುರುವಾಗಲಿದೆ. ಬಿಜೆಪಿ ಪಾಳಯದ ನಾಯಕನನ್ನೇ ಸೆಳೆದು ಮೇಲುಗೈ ಸಾಧಿಸೋ ಪ್ಲ್ಯಾನ್ ಮಾಡಲಾಗಿದೆ. ಜಯಪ್ರಕಾಶ್ ಹೆಗ್ಡೆ ಅವರು 2012ರ ಉಪಚುನಾವಣೆಯಲ್ಲಿ ಒಮ್ಮೆ ಗೆದ್ದಿದ್ದರು. ಆದರೆ, ಇದಕ್ಕಿಂರ ಮೊದಲು 2009ರಲ್ಲಿ ಸದಾನಂದಗೌಡರ ವಿರುದ್ಧ ಸೋತಿದ್ದರು. ಆದರೆ, 2014ರಲ್ಲಿ ಸೋಲಿನ ಬಳಿಕ ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ್ದರು. 

ಜಯಪ್ರಕಾಶ್ ಹೆಗ್ಡೆ ಲೆಕ್ಕಾಚಾರವೇನು? :  ಜಯಪ್ರಕಾಶ್ ಹೆಗ್ಡೆ ಅವರು ಕೂಡ ಉಡುಪಿ-ಚಿಕ್ಕಮಗಳೂರು BJP ಟಿಕೆಟ್ ನೀರಿಕ್ಷೆಯಲ್ಲಿದ್ದಾರೆ ಎಂದು ಕೇಳಿಬರುತ್ತಿದೆ. ಈ ಬಾರಿ ಬಿಜೆಪಿಯಿಂದ ಮಾಜಿ ಸಚಿವ ಸಿ.ಟಿ ರವಿಗೆ ಟಿಕೆಟ್‌ ನೀಡುವ ಸಾಧ್ಯತೆಯಿದೆ. ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಿಂದ ಸ್ಪರ್ಧಿಸೋ ಸಾಧ್ಯತೆಯಿದೆ. ಹೀಗಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗೋದಿಲ್ಲ ಎಂದು ಕಾಂಗ್ರೆಸ್​ನತ್ತ ಹೆಗ್ಡೆ ಕಣ್ಣಿಟ್ಟಿದ್ದಾರೆ. ಚಿಕ್ಕಮಗಳೂರನ್ನ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿರೋದ್ರಿಂದ ಗೆಲುವಿನ ಪ್ಲ್ಯಾನ್ ಕೂಡ ಲಭಯವಾಗುತ್ತಿದೆ. 

Video Top Stories