Asianet Suvarna News Asianet Suvarna News

'ಸಿದ್ದರಾಮಯ್ಯ ನಾಸ್ತಿಕವಾದಿ, ಅವರಿಂದ ಪಾಠ ಕಲಿಯಬೇಕಿಲ್ಲ'

Sep 18, 2021, 4:16 PM IST

ದಾವಣಗೆರೆ, (ಸೆ.18): ಮೈಸೂರಿನಲ್ಲಿ ದೇಗುಲ ತೆರವು ವಿಚಾರವಾಗಿ ಸಿದ್ದರಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ನಳಿನ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮಯ್ಯನವರಿಗೆ ಈಗ ಪ್ರೀತಿ ಬಂದಿದೆ: ಪ್ರತಾಪ್ ಸಿಂಹ ಟಾಂಗ್

ದಾವಣಗೆರೆಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯರಿಂದ ಹಿಂದೂ ಧರ್ಮದ ಪಾಠ ಕಲಿಯಬೇಕಿಲ್ಲ. ಅವರು ಹಿಂದೂ ದೇಗುಲ ಒಡೆದ ಟಿಪ್ಪು ಸುಲ್ತಾನನ ಜಯಂತಿ ಆಚರಿಸಿದ್ದರು. ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ ಸಂತೋಷಪಟ್ಟಿದ್ದರು. ಜತೆಗೆ ಲಿಂಗಾಯತ ಸಮುದಾಯ ಒಡೆಯಲು ಹೊರಟಿದ್ದರು. ಅಂಥ ನಾಸ್ತಿಕರಿಂದ ನಾವು ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಟಾಂಗ್ ಕೊಟ್ಟರು.