Asianet Suvarna News Asianet Suvarna News

ರಾಜೀನಾಮೆ ವಿಚಾರದಿಂದ ಅತಂತ್ರವಾಯಿತಾ ಮಿತ್ರ ಮಂಡಳಿ : ಮುಂದಿನ ನಡೆ ಏನು..?

Jul 24, 2021, 2:25 PM IST

 ಬೆಂಗಳೂರು (ಜು.24): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಿದೆ. ಜುಲೈ 26 ಕ್ಕೆ ಸಿಎಂ ರಾಜೀನಾಮೆ ಎನ್ನುವ ವಿಚಾರ ಗಂಭೀರವಾಗಿ ಚರ್ಚೆಯಾಗುತ್ತಿದೆ. ಇದೇ ವೇಳೆ ಮಿತ್ರಮಂಡಳಿ  ಮುಖಂಡರು ಸುದ್ದಿಯಾಗುತ್ತಿದ್ದಾರೆ.

ರಾಜೀನಾಮೆಗೆ ನಾನು ಸಿದ್ಧನಾಗಿದ್ದೇನೆ : ಸಚಿವ ಎಂಟಿಬಿ ನಾಗರಾಜ್

ಬಿಜೆಪಿ ಸರ್ಕಾರ ರಚನೆಯಾಗಲು ಪ್ರಮುಖ ಕಾರಣರಾದ  ಬಾಂಬೆ ಟೀಂನ ನಾಯಕರು ಸದ್ಯ ಸಚಿವ ಸ್ಥಾನ ಎಂಎಲ್‌ಸಿ ಸ್ಥಾನದಲ್ಲಿದ್ದಾರೆ. ಆದರೆ ಸಿಎಂ ರಾಜೀನಾಮೆ ಬಳಿಕ ನಾವೆಲ್ಲಾ ಏನಾಗಲಿದ್ದೇವೆ ಎನ್ನುವ ಆತಂಕ ಇದೆ. ಅದರೆ ಅದರ ಬಳಿಕ ಇವರ ನಿರ್ಧಾರವೇನು..? ನಿಜವಾಗಿಯೂ ಮಿತ್ರಮಂಡಳಿ ಅಂತ್ರವಾಯಿತಾ ಹಾಗದರೆ ಮುಂದಿನ ನಡೆ ಏನು..?