Asianet Suvarna News Asianet Suvarna News

ಮಿತ್ರ ಕಲಹ.. ಅಂತರ್ಯುದ್ಧ.. ಮೋದಿ ವಿರೋಧಿ ಮೈತ್ರಿಕೂಟ ಯುದ್ಧಕ್ಕೂ ಮೊದಲೇ ಛಿದ್ರ ಛಿದ್ರ..!


ಮೋದಿ ವಿರೋಧಿ ಮೈತ್ರಿಕೂಟ ಯುದ್ಧಕ್ಕೂ ಮೊದಲೇ ಛಿದ್ರ ಛಿದ್ರವಾಗಿದೆ. ಮೈತ್ರಿಕೂಟ ಆರಂಭವಾದ 9 ತಿಂಗಳಲ್ಲೇ ಇಡೀ ಹೋರಾಟ ಮುಕ್ತಾಯ ಕಂಡಿದೆ.
 

ಬೆಂಗಳೂರು (ಫೆ.21): ಇಂಡಿಯಾ ಮೈತ್ರಿಕೂಟಕ್ಕೆ ಕ್ಷಣಕ್ಕೊಂದು ವಿಘ್ನ.. ದಿನಕ್ಕೊಂದು ಆಘಾತ ಎದುರಾಗಿದೆ.  ಮೋದಿ ವಿರುದ್ಧ ತೊಡೆ ತಟ್ಟಿ ನಿಂತಿದ್ದವರು ತೊಡೆ ಮುರಿದುಕೊಂಡು ಬಿದ್ದಿದ್ದಾರೆ. ಈಗ I.N.D.I.A ಮೈತ್ರಿ ಮುಳುಗಿದ್ದು ಯಾಕೆ..? ಎನ್ನುವುದನ್ನು ಚುನಾವಣಾ ಚಾಣಾಕ್ಷ ತಿಳಿಸಿದ್ದಾರೆ.    

"ಮಹಾ ಮೈತ್ರಿ ಭಂಗ"ದ ಅಸಲಿ ಕಾರಣವನ್ನು ಪ್ರಶಾಂತ್ ಕಿಶೋರ್ ಬಿಚ್ಚಿಟ್ಟಿದ್ದಾರೆ. ಮಿತ್ರ ಕಲಹ.. ಅಂತರ್ಯುದ್ಧ.. ಅಂತಃಕಹಲ.. ಸಮರ.. ಸಂಘರ್ಷದಿಂದ ಇಡೀ ಮೈತ್ರಿಕೂಟದಲ್ಲಿ ಈಗ ಕೆಲವೇ ಪಕ್ಷಗಳು ಉಳಿದುಕೊಂಡಿದೆ. 9 ತಿಂಗಳಲ್ಲಿ ಒಂದೇ ಒಂದು ಸಮಾವೇಶವನ್ನೂ ಮೈತ್ರಿಕೂಟ ನಡೆಸಿಲ್ಲ "ಯುದ್ಧ ಕಾಲೇನ ಶಸ್ತ್ರಾಭ್ಯಾಸ" ಯುದ್ಧ ಗೆಲ್ಲಿಸುತ್ತಾ ಎಂದು ಚುನಾವಣಾ ಚಾಣಾಕ್ಷ ಪ್ರಶ್ನೆ ಮಾಡಿದ್ದಾರೆ.

21ನೇ ವಯಸ್ಸಿಗೆ ವಿಶ್ವಸುಂದರಿ ಪಟ್ಟ ಗೆದ್ದ ಐಶ್ವರ್ಯಾ ರೈಗೆ 'ನಾಚ್‌ನೇ ವಾಲಿ' ಎಂದ ರಾಹುಲ್‌ ಗಾಂಧಿ!

ದೇಶದ ಹತ್ತಾರು ಚುನಾವಣೆಗಳನ್ನು ಹತ್ತಿರದಿಂದ ಕಂಡವರು ಪ್ರಶಾಂತ್ ಕಿಶೋರ್. ಅಂಥಾ ಚಾಣಕ್ಯ ಹೇಳ್ತಿದ್ದಾರೆ I.N.D.I.A ಮೈತ್ರಿಕೂಟದ ಪಾಲಿಗೆ ಕಾಲ ಮಿಂಚಿ ಹೋಗಿದೆ ಅಂತ. ಅಲ್ಲಿಗೆ ಮೋದಿ ಹ್ಯಾಟ್ರಿಕ್ ಪಕ್ಕಾ ಅನ್ನೋ ಭವಿಷ್ಯ ನುಡಿದಿದ್ದಾರೆ ಚುನಾವಣಾ ಚಾಣಕ್ಯ.  

Video Top Stories