ವಿಸ್ತರಣೆ ಪಕ್ಕಾ ಆಗ್ತಿದ್ದಂತೆ ನಾನು ಕೂಡಾ ಪ್ರಬಲ ಆಕಾಂಕ್ಷಿ ; ಶಾಸಕರಿಗೆ ವರಸೆ ಶುರು
ಸಚಿವ ಸಂಪುಟ ವಿಸ್ತರಣೆ ಜ. 13 ಕ್ಕೆ ನಿಗದಿಯಾಗಿದೆ. 7 ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಂಭಾವ್ಯ ಸಚಿವರ ಹೆಸರುಗಳು ಓಡಾಡುತ್ತಿದ್ದರೂ, ಇನ್ನೂ ಯಾವುದೂ ಅಧಿಕೃತವಾಗಿಲ್ಲ.
ಬೆಂಗಳೂರು (ಜ. 11): ಸಚಿವ ಸಂಪುಟ ವಿಸ್ತರಣೆ ಜ. 13 ಕ್ಕೆ ನಿಗದಿಯಾಗಿದೆ. 7 ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಂಭಾವ್ಯ ಸಚಿವರ ಹೆಸರುಗಳು ಓಡಾಡುತ್ತಿದ್ದರೂ, ಇನ್ನೂ ಯಾವುದೂ ಅಧಿಕೃತವಾಗಿಲ್ಲ. ಸಂಪುಟ ವಿಸ್ತರಣೆ ಅಧಿಕೃತವಾಗುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಸಂಪುಟಕ್ಕೆ ಯಾರು ಸೇರ್ತಾರೆ, ಯಾರನ್ನ ಕೈ ಬಿಡ್ತಾರೆ..? ಸವದಿ ಸಾಹೇಬ್ರು ಏನಂತಾರೆ..?
'ನಾನು ಕೂಡಾ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಸಚಿವ ಸ್ಥಾನ ಸಿಗುತ್ತದೆಂಬ ಭರವಸೆ ಇದೆ' ಎಂದು ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿದ್ದಾರೆ.