Asianet Suvarna News Asianet Suvarna News

ಹೊಸಕೋಟೆಯಲ್ಲಿ ಗಲಾಟೆ; ಕೈ ಕೈ ಮಿಲಾಯಿಸಿದ ಎಂಟಿಬಿ- ಶರತ್ ಬೆಂಬಲಿಗರು

Dec 5, 2019, 3:15 PM IST

ಹೊಸಕೋಟೆ (ಡಿ.05): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.  ಹೈವೋಲ್ಟೇಜ್ ಕ್ಷೇತ್ರವಾಗಿರುವ ಹೊಸಕೋಟೆಯಲ್ಲಿ ಬಿಜೆಪಿ ಮತ್ತು ಶರತ್ ಬಚ್ಚೇಗೌಡ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.

ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಸದ ಬಿ.ಎನ್. ಬಚ್ಚೇಗೌಡ ಪುತ್ರ ಶರತ್ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಬಿಜೆಪಿಯು ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್‌ರನ್ನು ಕಣಕ್ಕಿಳಿಸಿದೆ.

ಡಿ.09ಕ್ಕೆ ಉಪಚುನಾವಣೆಯ ಫಲಿತಾಂಶಗಳು ಪ್ರಕಟವಾಗಲಿವೆ. ಪಕ್ಷೇತರರು ಸೇರಿದಂತೆ ಒಟ್ಟು 165  ಅಭ್ಯರ್ಥಿಗಳು ಕಣದಲ್ಲಿದ್ದಾರೆ.


 

Video Top Stories