Asianet Suvarna News Asianet Suvarna News

'ಬಿಎಸ್‌ವೈ ಧೂಳಿಗೂ ಸಮವಲ್ಲದವರು ದಿನಾ ಬೆಳಗಾದ್ರೆ ಟೀಕೆ ಮಾಡ್ತಾರೆ'

Jul 5, 2021, 7:56 PM IST

ಮೈಸೂರು(ಜು.  05) ಕೇಸರಿ ಪಾಳಯದಲ್ಲಿ ನಾಯಕತ್ವ ಬದಲಾವಣೆ ಮಾತು ಸದ್ಯಕ್ಕೆ ನಿಲ್ಲುವ ಲಕ್ಷಣ  ಕಾಣುತ್ತಿಲ್ಲ.  ಸಿಎಂ ಯಡಿಯೂರಪ್ಪ ವಿರುದ್ಧ  ಹೇಳಿಕೆ ನೀಡುತ್ತಿರುವವರ ವಿರುದ್ಧ ಸಚಿವ ಎಸ್‌ಟಿ ಸೋಮಶೇಖರ್ ಫುಲ್ ಗರಂ ಆಗಿದ್ದರು.

ಕುಮಾರಸ್ಚಾಮಿ VS  ಸುಮಲತಾ, ಎಲ್ಲಿಂದ ಹುಟ್ಟಿಕೊಂಡ ವಿವಾದ?

ಯಡಿಯೂರಪ್ಪನವ್ರ ಧೂಳಿಗೂ ಸಮನಾಗಿಲ್ಲದವರೂ ಯಡಿಯೂರಪ್ಪ ಅವ್ರನ್ನು ದಿನ ಬೆಳಗಾದ್ರೆ ಟೀಕಿಸುತ್ತಿದ್ದಾರೆ.  ಸೋಕಾಲ್ಡ್ ಲೀಡರ್ ಹೇಳುತ್ತಿದ್ದಾರೆ. ನಮ್ಮಿಂದ ಸರ್ಕಾರ ಬಂತು, ನಮ್ಮಿಂದ ಸರ್ಕಾರ ಬಂತು ಎಂದು ಪದೇ ಪದೇ ಕೆಲವರು ಹೇಳುತ್ತಿದ್ದಾರೆ. ಸ್ವಲ್ಪನಾದ್ರೂ ಸಾಮಾನ್ಯ ಜ್ಞಾನ ಇರ್ಬೇಕು ಎಂದು  ಸಚಿವ ಯೋಗೇಶ್ವರ ಹಾಗೂ ಎಚ್.ವಿಶ್ವನಾಥ್ ಗೆ ಟಾಂಗ್ ನೀಡಿದ್ದಾರೆ.

ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 104 ಸ್ಥಾನ ಗೆಲ್ಲದಿದ್ದರೆ ಸರ್ಕಾರ ಮಾಡಲು ಸಾಧ್ಯವಿತ್ತೆ?  ನಾವು ಇವರನ್ನು ನಂಬಿಕೊಂಡು ಬಂದಿಲ್ಲ. ಅಷ್ಟೆಲ್ಲ ಹೇಳುವವರು ನೇರವಾಗಿ ಸಭೆಯಲ್ಲಿ ಮಾತನಾಡಲಿ ಎಂದು ಸವವಾಲು ಹಾಕಿದರು.