ಅರಕೇರಾದ ಕಾಫಿಗೆ ಆರ್. ಅಶೋಕ್ ಫಿದಾ: ಹಳ್ಳಿ ಜನರ ಆತಿಥ್ಯಕ್ಕೆ ಮನಸೋತ ಸಚಿವ!
ರಾಯಚೂರಿನ ಅರಕೇರಾ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯಿತು. ಗ್ರಾಮದಲ್ಲಿ ಸಚಿವ ಆರ್. ಅಶೋಕ್ ವಾಸ್ತವ್ಯ ಹೂಡಿ, ಅಲ್ಲಿಯ ಹಳ್ಳಿ ಜನರ ಪ್ರೀತಿಗೆ ಮನ ಸೋತಿದ್ದಾರೆ.
ಅರಕೇರಾ ಗ್ರಾಮದಲ್ಲಿ ಟೀ ಸ್ಟಾಲ್'ನಲ್ಲಿ ಕುಳಿತು ಸಚಿವ ಆರ್. ಅಶೋಕ್ ಸಮಸ್ಯೆ ಆಲಿಸಿದ್ದು, ಹಳ್ಳಿಗೆ ಬಂದಾಗ ಮಾತ್ರ ಹಳ್ಳಿಯ ಜನರ ಪ್ರೀತಿ ಗೊತ್ತಾಗುತ್ತದೆ ಎಂದು ಹೇಳಿದರು. ಅರಕೇರಾದ ಬಿಸಿಎಂ ಹಾಸ್ಟೆಲ್'ನಲ್ಲಿ ಉಳಿದುಕೊಂಡ ಸಚಿವರು, ಗ್ರಾಮಸ್ಥರೊಂದಿಗೆ ಕುಂದುಕೊರತೆಗಳ ಚರ್ಚೆ ಮಾಡಿದ್ದಾರೆ. ಈ ವೇಳೆ ಕಾಫಿ ಸವಿದ ಅವರು ಇಂತಹ ಕಾಫಿ ಬೆಂಗಳೂರಲ್ಲೂ ಸಿಗಲ್ಲ ಎಂದು ಹೇಳಿದರು.
ಸಂಚಲನ ಮೂಡಿಸಿದ ರಾಜಕೀಯ ಯಾತ್ರೆಗಳು; ಮುಂದಿನ ರಾಜಕೀಯ ಭವಿಷ್ಯಕ್ಕೆ ನಿರ್ಣಾಯಕ