ಬಿಜೆಪಿ ನಾಯಕನಿಗೆ 6 ಗಂಟೆಗಳ ನರಕ ತೋರಿಸಿತಾ ಖಾಕಿ ಪಡೆ? ಅನ್ನ ನೀರಿಲ್ಲದೆ ಅಲೆದಾಡಿಸಿದ್ದು ಅದೇ ಕಾರಣಕ್ಕಾ?
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪದ ಮೇರೆಗೆ ಬಂಧಿತರಾದ ಸಿ.ಟಿ.ರವಿ ಅವರನ್ನು ಪೊಲೀಸರು ರಾತ್ರಿಯಿಡೀ ಸುತ್ತಾಡಿಸಿದ ಘಟನೆ. ಹೈಕೋರ್ಟ್ ಮಧ್ಯಪ್ರವೇಶದಿಂದ ಬಿಡುಗಡೆ.
ಆ ಆರು ಗಂಟೆಗಳು ಬಿಜೆಪಿ ನಾಯಕ ಸಿ.ಟಿ ರವಿ ಅವರ ಪಾಲಿಗೆ ನಿಜಕ್ಕೂ ಕರಾಳ. ಅಷ್ಟಕ್ಕೂ ಪೊಲೀಸ್ರು ಇಷ್ಟೊಂದು ಅಮಾನವೀಯವಾಗಿ ನಡೆದುಕೊಂಡದ್ದು ಯಾಕೆ? ಹೀಗೇ ಮಾಡಿ ಅಂತ ಪೊಲೀಸ್ರಿಗೆ ಮೇಲಿನವರ ಆದೇಶ ಇತ್ತಾ? ವಿಧಾನ ಪರಿಷತ್'ನಲ್ಲಿ ನಡೆದ ಘಟನೆಯ ಬಗ್ಗೆ ಮಾತಾಡ್ತಾ ಮಹಾಭಾರತದ ಧೃತರಾಷ್ಟ್ರನನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೆನಪಿಸಿದ್ದೇಕೆ? ಆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಕುಂದಾನಗರಿಯ ಕರಾಳ ರಾತ್ರಿಯ ನಂತ್ರ ಬೆಂಗಳೂರಿಗೆ ಬರ್ತಾ ಇದ್ದಂತೆ ಸಿ.ಟಿ ರವಿ ಅವ್ರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ವೀಕೆಂಡ್'ನಲ್ಲಿ ಲಾಕ್ ಆಗೋ ಭಯದಲ್ಲಿದ್ದ ಸಿ.ಟಿ ರವಿ ಅವ್ರನ್ನು ಈ ಕ್ಷಣವೇ ರಿಲೀಸ್ ಮಾಡ್ಬೇಕು ಅಂತ ಹೈಕೋರ್ಟ್ ತೀರ್ಪು ನೀಡಿದ್ದು, ದೊಡ್ಡ ಸಮಾಧಾನ ತಂದಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮೇಲ್ಮನೆಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇರೆಗೆ ಬಂಧಿಸಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಬೆಳಗಾವಿ ಪೊಲೀಸರು ಗುರುವಾರ ರಾತ್ರಿಯಿಡೀ ಖಾನಾಪುರ, ಕಿತ್ತೂರು, ರಾಮದುರ್ಗ, ಲೋಕಾಪುರ, ಅಂಕಲಿ ಸೇರಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 500 ಕಿ.ಮೀ.ಗೂ ಹೆಚ್ಚು ದೂರ ಸುತ್ತಾಡಿಸಿದ್ದರು.