ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್: ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ
ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು (ಗುರುವಾರ) ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ತುಮಕೂರು, (ಜ.07): ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು (ಗುರುವಾರ) ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ಪರಿಹಾರ ಕೇಳಿದ ರೈತರಿಗೆ ಸಚಿವರಿಂದ ಅವಮಾನ : ಆಕ್ರೋಶ
'ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತೀಯಾ ಗೊತ್ತಾ? ಕತ್ತೆ ಕಾಯೋಕ್ ಬಂದಿದ್ದೀಯಾ ಇಲ್ಲಿಗೆ… ಸರ್ಕಾರದ ಕೆಲಸ ಮಾಡೋದು ಬಿಟ್ಟು ನಿನ್ನ ಹೆಂಡತಿಗೆ ಸೀರೆ ತರಲು ಹೋಗಿದ್ದಾ? ರಾಸ್ಕಲ್…ಅಂತೆಲ್ಲಾ ಏಕವಚನದಲ್ಲಿ ಬೈದಿದ್ದಾರೆ.