Asianet Suvarna News Asianet Suvarna News

ಸಿಎಂ ಸಂಧಾನ ಬಳಿಕ ಅಧಿಕಾರ ಸ್ವೀಕರಿಸದೇ ಕ್ಷೇತ್ರಕ್ಕೆ ಆಗಮಿಸಿದ ಆನಂದ್ ಸಿಂಗ್

Aug 13, 2021, 5:03 PM IST

ವಿಜಯನಗರ, (ಆ.13): ಖಾತೆ ವಿಚಾರವಾಗಿ ಮುನಿಸಿಕೊಂಡು ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದ ಸಚಿವ ಆನಂದ್ ಸಿಂಗ್ ರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿದ್ದಾರೆ. 

ಆನಂದ್ ಸಿಂಗ್ ಹೊಸಪೇಟೆ ಶಾಸಕರ ಕಚೇರಿ ಓಪನ್, ಸಂಧಾನ ಸಕ್ಸಸ್.?

ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್ ರನ್ನು ಕರೆಸಿಕೊಂಡು ಬೊಮ್ಮಾಯಿ ಅವರು ಕೊನೆಗೂ ಸಮಾಧಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಚಿಂತನೆ ಕೈಬಿಟ್ಟಿದ್ದಾರೆ. ಆದ್ರೆ, ಇದೀಗ ಆನಂದ್ ಸಿಂಗ್ ಯಾವುದೇ ಅಧಿಕಾರ ಸ್ವೀಕಾರ ಮಾಡದೇ ನೇರವಾಗಿ ಕ್ಷೇತ್ರಕ್ಕೆ ಆಗಮಿಸಿದ್ದು ಮತ್ತೆ ಕುತೂಹಲ ಮೂಡಿಸಿದೆ.