ಬೆಳಗಾವಿ ಚಳಿಗಾಲ ಅಧಿವೇಶನ: ಬಿಜೆಪಿಯಿಂದ ಮಾಸ್ಟರ್‌ ಪ್ಲಾನ್

ಡಿಸೆಂಬರ್‌ 19ರಿಂದ 29ರವೆರೆಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷಗಳ ಕೈ ಮೇಲಾಗದಂತೆ ಮಾಡಲು ಬಿಜೆಪಿ ಮಾಸ್ಟರ್‌ ಪ್ಲಾನ್ ಮಾಡಿದೆ. 

First Published Dec 7, 2022, 12:55 PM IST | Last Updated Dec 7, 2022, 12:55 PM IST

ಬೆಂಗಳೂರು (ಡಿ.07): ಡಿಸೆಂಬರ್‌ 19ರಿಂದ 29ರವೆರೆಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷಗಳ ಕೈ ಮೇಲಾಗದಂತೆ ಮಾಡಲು ಬಿಜೆಪಿ ಮಾಸ್ಟರ್‌ ಪ್ಲಾನ್ ಮಾಡಿದೆ. ಜಾತಿ, ಪ್ರಾದೇಶಿಕತೆ ಕಾರ್ಡ್ ಪ್ಲೇ ಮಾಡಲು ಬಿಜೆಪಿ ಚಿಂತನೆ ನಡೆಸಿದ್ದು, ಮತಬೇಟೆ ನಡೆಸಲು ಪ್ಲಾನ್ ಮಾಡಲಾಗಿದೆ. ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದ ಜನರ ಭಾವನಾತ್ಮಕ ಯೋಜನೆಗಳ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಜಾತಿ ಆಧಾರದ ವೋಟ್, ಬ್ಯಾಂಕ್‌ಗಾಗಿ ಯೋಜನೆ ರೂಪಿಸುವುದು. ಬೆಳಗಾವಿ-ಕಿತ್ತೂರು, ಧಾರವಾಡ ರೈಲು ಯೋಜನೆಗೆ ಶಂಕುಸ್ಥಾಪನೆ, ಬೆಳಗಾವಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಉದ್ಘಾಟನೆಗೆ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. 

Video Top Stories