ಖಡ್ಗ ಹಿಡಿದು ರಸ್ತೆಯಲ್ಲಿ ರಾಜರೋಷವಾಗಿ ಓಡಾಡಿದ ಯತ್ನಾಳ್‌ ಅಭಿಮಾನಿ: ವೈರಲ್‌ ವಿಡಿಯೋ

ಬಸನಗೌಡ ಪಾಟೀಲ್‌ ಯತ್ನಾಳ್‌ ಗೆದ್ದ ಖುಷಿಗೆ ಅಭಿಮಾನಿಯೊಬ್ಬ ಕೈಯಲ್ಲಿ ಖಡ್ಗ ಹಿಡಿದು ರಸ್ತೆಯುದ್ಧಕ್ಕೂ ಓಡಾಡಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.
 

First Published May 14, 2023, 3:43 PM IST | Last Updated May 14, 2023, 3:43 PM IST

ವಿಜಯಪುರ: ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್‌ ಯತ್ನಾಳ್ ಗೆಲುವಿನ ಬೆನ್ನಲ್ಲೆ ಕಾರ್ಯಕರ್ತರು ಅತಿರೇಕದ ವರ್ತನೆ ತೋರಿದ್ದಾರೆ. ಕೈಯಲ್ಲಿ ಖಡ್ಗ ಹಿಡಿದು ಅಭಿಮಾನಿ ಸಂಭ್ರಮಿಸಿದ್ದಾನೆ. ಯತ್ನಾಳ್ ಗೆದ್ದ ಬಳಿಕ ಕಾರ್ಯಕರ್ತರು, ಬೆಂಬಲಿಗರು ಮೆರವಣಿಗೆ ನಡೆಸಿದ್ದರು.ಈ ವೇಳೆ ಖಡ್ಗ ಹಿಡಿದುಕೊಂಡು ಬಂದ ಓರ್ವ ಕಾರ್ಯಕರ್ತ, ನಗರದ ಸಿದ್ದೇಶ್ವರ ದೇಗುಲದ ಬಳಿ ಅಡ್ಡಾಡಿದ್ದಾನೆ. ಗಾಂಧಿ ಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿಜಯಪುರದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಕತ್ತಿಯನ್ನು ಹಿಡಿದು ಓಡಾಡುವ ದೃಶ್ಯ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. 

ಇದನ್ನೂ ವೀಕ್ಷಿಸಿ: ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ: ಸಿಎಂ ಆಗ್ತೀನಿ ಎಂಬ ನಂಬಿಕೆ ನನಗಿದೆ ಎಂದ ಶಿವಕುಮಾರ್‌

Video Top Stories