Asianet Suvarna News Asianet Suvarna News

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು, ಇಂದೇ ರಾಜೀನಾಮೆ ಕೊಡ್ತಾರಾ ಉದ್ಧವ್ ಠಾಕ್ರೆ!

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣವಾಗಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಕ್ಕೆ ದಿನಗಣನೆ ಆರಂಭವಾಗಲಿದೆ. ಮೂಲಗಳ ಪ್ರಕಾರ ಬುಧವಾರವೇ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನ್ನಲಾಗಿದೆ.
 

ಮುಂಬೈ (ಜೂನ್ 22): ಮಹಾರಾಷ್ಟ್ರದಲ್ಲಿ (Maharashtra) ದೋಸ್ತಿ ಸರ್ಕಾರ ಪತನವಾಗುವುದು ನಿಶ್ಚಯವಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ (CM Uddhav Thackeray) ಬುಧವಾರವೇ ರಾಜೀನಾಮೆ ನೀಡಬಹುದು ಎಂದು ಹೇಳಲಾಗಿದೆ. ಸಂಜೆಯ ವೇಳೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಇಲ್ಲಿ ಮುಂದಿನ ನಡೆಯ ಬಗ್ಗೆ ನಿರ್ಧಾರವಾಗಲಿದೆ.

ಮಹಾ ವಿಕಾಸ್ ಅಘಾಡಿ (Maha Vikas aghadi) ಸರ್ಕಾರ 2 ವರ್ಷ 8 ತಿಂಗಳ ಕಾಲ ಅಧಿಕಾರ ನಡೆಸಿದೆ. ಆದರೆ, ಸಚಿವ ಏಕನಾಥ್ ಸಿಂಧೆ ಬಂಡಾಯವೆದ್ದಿದ್ದು, ಅಂದಾಜು 42 ಶಿವಸೇನಾ ಶಾಸಕರೊಂದಿಗೆ ಅಸ್ಸಾಂಗೆ ತೆರಳಿದ್ದಾರೆ. ಇದರ ಬೆನ್ನಲ್ಲಿಯೇ ಮಹಾರಾಷ್ಟ್ರದಲ್ಲಿ ಸರ್ಕಾರ ಪತನದ ನಿರೀಕ್ಷೆ ಆರಂಭವಾಗಿದೆ.

ಶಿವಸೇನೆ ಸುತ್ತ ಸದ್ದಿಲ್ಲದೆ ಬಲೆ ಹೆಣೆದ ಫಡ್ನವೀಸ್‌, ಉದ್ಧವ್‌ಗೆ ಸುಳಿವೂ ಸಿಕ್ಕಿರಲಿಲ್ಲ!

ಇನ್ನೊಂಡೆದೆ ಶಿವಸೇನಾ ವಕ್ತಾರ ಸಂಜಯ್ ರಾವತ್, ಸರ್ಕಾರ ವಿಸರ್ಜನೆಯಾಗುವ ಬಗ್ಗೆ ಸೂಚನೆಯನ್ನೂ ನೀಡಿದ್ದಾರೆ. ಇನ್ನು ಏಕನಾಥ್ ಶಿಂಧೆ ಅವರ ಮನವೊಲಿಕೆ ಮಾಡಲು ಉದ್ಧವ್ ಠಾಕ್ರೆ ಸಂಧಾನಕಾರರನ್ನು ಕಳುಹಿಸಿದ್ದರು. ಆದರೆ, ಶಿಂಧೆ ಅವರ ಮನವೊಲಿಸುವಲ್ಲಿ ಅವರು ವಿಫಲರಾಗಿದ್ದಾರೆ.

Video Top Stories