Asianet Suvarna News Asianet Suvarna News

ಬೆಳಗಾವಿ ಏನು ಮಹಾರಾಷ್ಟ್ರ ಮಂತ್ರಿಗಳ ಮಾವನ ಮನೆಯೇ?: ಲಕ್ಷ್ಮಣ ಸವದಿ ಕಿಡಿ

ಬೆಳಗಾವಿಗೆ ಬರುತ್ತೇನೆ ಎಂಬ ಚಂದ್ರಕಾಂತ ಪಾಟೀಲ್‌ ಹೇಳಿಕೆ ವಿಚಾರವಾಗಿ, ಮಹಾರಾಷ್ಟ್ರ ನಾಯಕರು ಇಲ್ಲಿ ಯಾಕೆ ಬರುತ್ತಾರೆ ಲಕ್ಷ್ಮಣ ಸವದಿ ಕಿಡಿ ಕಾರಿದ್ದಾರೆ.
 

ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿಯಲ್ಲಿ ಏನು ಕೆಲಸ ಇದೆ, ಬೆಳಗಾವಿ ಏನೂ ಮಹಾರಾಷ್ಟ್ರ ಮಂತ್ರಿಗಳ ಮಾವನ ಮನೆಯೇ ಎಂದು ಮಹಾರಾಷ್ಟ್ರ ಸಚಿವರಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ಸುಮ್ಮನೆ ಅವರು ಬರುತ್ತೇನೆ ಎಂದು ಹೇಳುತ್ತಾರೆ, ಆದ್ರೆ ಅವರು ಬರಲ್ಲ. ಮಹಾರಾಷ್ಟ್ರ ಸಚಿವರನ್ನು ಬರಲು ನಾವು ಬಿಡಲ್ಲ. ಮಹಾರಾಷ್ಟ್ರ ಹಾಗೂ ಎಂಇಎಸ್‌ ನಾಯಕರಿಗೆ ಬೇರೆ ವಿಷಯವೇ ಇಲ್ಲ. ಎಂಇಎಸ್‌ ಸಂಪೂರ್ಣ ಸತ್ತು ಹೋಗಿದೆ, ಜೀವಂತ ಇಲ್ಲ ಎಂದರು. ಬೆಳಗಾವಿ ನಮ್ಮ ರಾಜ್ಯದ ಅವಿಭಾಜ್ಯ ಅಂಗ. ಅವರು ಹೇಗೇ ಕೇಳುತ್ತಾರೆ?. ಇದು ಅನವಶ್ಯಕವಾಗಿ ಗೊಂದಲ ಹುಟ್ಟಿಸಿ ಸಾಮರಸ್ಯ ಹಾಳು ಮಾಡುವ ಹುನ್ನಾರ‌. ಶಾಸಕರಾಗಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಿ ಶಾಸಕರಾಗಲಿ‌ ಎಂದರು.

Assembly election: ಬಂಡಾಯದ ನೆಲದಲ್ಲಿ ಬಿಸಿಯೇರಿದ ಟಿಕೆಟ್‌ ದಂಗಲ್‌