News Hour: ಕೋಲಾರ ಟಿಕೆಟ್ಗಾಗಿ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧ!
ಕೋಲಾರ ಟಿಕೆಟ್ಗಾಗಿ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧ ಶುರುವಾಗಿದೆ. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಟ್ರೆ ರಾಜೀನಾಮೆ ಬೆದರಿಕೆ ಅಸ್ತ್ರ ಹಾಕಲಾಗಿದೆ. ಸಭಾಪತಿ ಕಚೇರಿಯಲ್ಲೇ ಶಾಸಕರ ಸಂಧಾನ ಪ್ರಹಸನ ನಡೆದಿದೆ.
ಬೆಂಗಳೂರು (ಮಾ.27): ಕರ್ನಾಟಕದಲ್ಲಿ ಎರಡು ರಾಜಕೀಯ ಪಕ್ಷಗಳ ಆಂತರಿಕ ಬೇಗುದಿ ಬುಧವಾರ ಸುದ್ದಿಯಾಗಿದೆ. ಕೋಲಾರ ಟಿಕೆಟ್ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧ ಪ್ರಾರಂಭವಾಗಿದ್ದರೆ, ರಾಯಚೂರು ಬಂಡಾಯಕ್ಕೆ ಬಿಜೆಪಿ ಥಂಡಾ ಹೊಡೆದಿದೆ.
ಈ ನಡುವೆ ಬಿಜೆಪಿ ಹೈಕಮಾಂಡ್, ಮಾಜಿ ಸಚಿವ ಗೋವಿಂದ್ ಕಾರಜೋಳಗೆ ಚಿತ್ರದುರ್ಗ ಟಿಕೆಟ್ ಘೋಷಣೆ ಮಾಡಿದೆ. ಸ್ಥಳೀಯರ ವಿರೋಧ ಮಧ್ಯೆಯೂ ಹೈಕಮಾಂಡ್ ಕಾರಜೋಳ ಅವರಿಗೆ ಮಣೆ ಹಾಕಿದೆ. ಕೇಂದ್ರ ಸಚಿವ ನಾರಾಯಣ್ ಸ್ವಾಮಿಗೆ ಟಿಕೆಟ್ ಮಿಸ್ ಆಗಿದೆ.
ಲೋಕಸಭಾ ಚುನಾವಣೆ ಸನಿಹದಲ್ಲಿ ಬಿಜೆಪಿಗೆ ಆಘಾತ; ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ
ಕೋಲಾರದ ಕಾಂಗ್ರೆಸ್ ಗಲಾಟೆಯನ್ನು ನೋಡಿರುವ ಜೆಡಿಎಸ್ ತನ್ನಅಭ್ಯರ್ಥಿ ಸಸ್ಪೆನ್ಸ್ ಇನ್ನೂ ಮುಂದುವರಿಸಿದೆ. ಕಾಂಗ್ರೆಸ್ ಅಭ್ಯರ್ಥಿ ನೋಡಿ ಪಟ್ಟಿ ಬಿಡುಗಡೆ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. 2019ರ ಮ್ಯಾಜಿಕ್ ನಿರೀಕ್ಷೆಯಲ್ಲಿ ದಳಪತಿ ರಣತಂತ್ರ ಮಾಡುತ್ತಿದ್ದಾರೆ.