ನೊಂದ ಕಾರ್ಯಕರ್ತರ ಧ್ವನಿಯಾಗಿ, ಹಿಂದುತ್ವದ ಪರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಕೆ.ಎಸ್‌.ಈಶ್ವರಪ್ಪ

ನಾನು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡ್ತೇನೆ
ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ 
ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ

First Published Mar 16, 2024, 11:52 AM IST | Last Updated Mar 16, 2024, 11:53 AM IST

ನಾನು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ  ಮಾಡುತ್ತೇನೆ. ನನ್ನ ನಿಲುವಿನಲ್ಲಿ  ಯಾವುದೇ ಬದಲಾವಣೆ ಇಲ್ಲ.ಬಿಜೆಪಿ ಪಕ್ಷ(BJP)  ತಂದೆ ಮಕ್ಕಳ ಕೈಗೆ ಸಿಕ್ಕಿದೆ. ಇದರಿಂದ ಕಾರ್ಯಕರ್ತರು  ಪರದಾಡುತ್ತಿದ್ದಾರೆ. ಪಕ್ಷ  ಉಳಿಸಲು  ನನ್ನ ಈ ಹೋರಾಟ , ರಾಜ್ಯಾಧ್ಯಕ್ಷ  ಸ್ಥಾನವನ್ನು ಲಿಂಗಾಯತ  ಯತ್ನಾಳ. ಒಕ್ಕಲಿಗ  ಸಿ ಟಿ  ರವಿ , ಹಿಂದುಳಿದ  ನನಗೆ  ಯಾಕೆ ಕೊಟ್ಟಿಲ್ಲ. ನಾವು ಪಕ್ಷ ಸಂಘಟನೆ  ವಿಚಾರಕ್ಕೆ  ಇವರಿಗೆ ರಾಜ್ಯಾಧ್ಯಕ್ಷ  ಸ್ಥಾನ ನೀಡಬೇಕಿತ್ತು. ಆದರೆ ಅದು ಬಿಟ್ಟು ವಿಜಯೇಂದ್ರ ಗೆ ರಾಜ್ಯಾಧ್ಯಕ್ಷ  ಸ್ಥಾನ ನೀಡಿದರು ಎಂದು ಈಶ್ವರಪ್ಪ(KS Eshwarappa) ಕಿಡಿಕಾರಿದ್ದಾರೆ. ನಾನು ಹಿಂದುತ್ವದ(Hindutva)  ವಿಚಾರದ ಮೇಲೆ ಚುನಾವಣೆ ಮಾಡುತ್ತೇನೆ. ರಾಘವೇಂದ್ರ ಲಿಂಗಾಯತ  ಅಂತಾ  ಚುನಾವಣೆ ಮಾಡುತ್ತಾರೆ. ಅವರು ಲಿಂಗಾಯತರಿಗೆ ಏನು ಕೊಟ್ಟಿದ್ದಾರೆ. ಅವರಿಗೆ ಮಾತ್ರ  ಲಿಂಗಾಯತರು ಸಿಮೀತ ಆಗಿಲ್ಲ. ನಮ್ಮ  ಜೊತೆ ಕೂಡಾ ಈ ಸಮಾಜ   ಇದೆ. ನಾನು ಪಕ್ಷೇತರ ಅಭ್ಯರ್ಥಿ ಘೋಷಣೆ ಬಳಿಕ  ರಾಜ್ಯಾದ್ಯಂತ  ಬೆಂಬಲ ಸಿಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Nikhil on Sumalatha: ನನ್ನ ವಿರುದ್ಧ ನಿಂತಿದ್ದ ಆ ತಾಯಿ ಗೆಲುವಿಗೆ ಕಾಂಗ್ರೆಸ್‌ ಕಾರಣ: ನಿಖಿಲ್ ಕುಮಾರಸ್ವಾಮಿ