Asianet Suvarna News Asianet Suvarna News

ರೌಡಿ ಶೀಟರ್ ಮೊರೆ ಹೋದ ಕೈ ನಾಯಕ! ಎಲೆಕ್ಷನ್ ಗೆಲ್ಲಲು ಇದೆಲ್ಲಾ ಬೇಕಾ?

Oct 16, 2019, 4:46 PM IST

ಬೆಂಗಳೂರು (ಅ.16): ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ನಾಯಕರೊಂದಿಗೆ ಬೆಂಗಳೂರಿನ ಕುಖ್ಯಾತ ರೌಡಿಯೊಬ್ಬ ಚರ್ಚೆ ನಡೆಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಸುಮಾರು 48 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ರೌಡಿ ಇಷ್ತಿಯಾಕ್, ರಿಜ್ವಾನ್ ಅರ್ಷದ್ ಜೊತೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಹಾಲಿ ವಿಧಾನ ಪರಿಷತ್ತು ಸದಸ್ಯ ರಿಜ್ವಾನ್ ಅರ್ಷದ್, ಶಿವಾಜಿನಗರ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ.

ರೋಷನ್ ಬೇಗ್ ರಾಜೀನಾಮೆಯಿಂದ ಶಿವಾಜಿನಗರ ಕ್ಷೇತ್ರದ ಶಾಸಕ ಸ್ಥಾನ ತೆರವಾಗಿದ್ದು ಡಿ.05ರಂದು ಉಪ-ಚುನಾವಣೆ ನಡೆಯಲಿದೆ.  ಡಿ.09ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 

Video Top Stories