Asianet Suvarna News Asianet Suvarna News

18ಕ್ಕೆ ಕಂಟಕ! ಯಾರವರು? ಯಾಕಿಲ್ಲ ಟಿಕೆಟ್? ಇನ್‌ಸೈಡ್‌ ಕಹಾನಿ

ರಾಜ್ಯ ಬಿಜೆಪಿಯ 18 ಮಂದಿ ಹಾಲಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗೋದು ಡೌಟ್‌ ಎನ್ನಲಾಗುತ್ತಿದೆ. ಹೈಕಾಂಡ್‌ ನಿರ್ಧಾರದ ಹಿಂದಿನ ಕಾರಣ ಏನು? ಯಾರಿಗೆಲ್ಲಾ ಟಿಕೆಟ್‌ ಕೈತಪ್ಪೋ ಸಾಧ್ಯತೆ ಇದೆ?

ಬೆಂಗಳೂರು (ಏ.29): ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ (State Assmbley Election) ಈಗಾಗಲೇ ಎಲ್ಲಾ ಪಕ್ಷಗಳು ತಮ್ಮ ಸಿದ್ಧತೆಯನ್ನು ಆರಂಭ ಮಾಡಿವೆ. ಇದರ ನಡುವೆ ಬಿಜೆಪಿ ಪಕ್ಷವು ತನ್ನ ಹಾಲಿ ಶಾಸಕರಿಗೆ (MLA) ಶಾಕ್ ನೀಡಿದ್ದು, 18 ಹಾಲಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಬಹುದು ಎಂದು ಹೇಳಲಾಗಿದೆ.

ಅವರೆಷ್ಟೇ ಪ್ರಭಾವಿಗಳಾಗಿದ್ದರೂ 18 ಮಂದಿಯ ಲಿಸ್ಟ್ ನಲ್ಲಿರುವ ಈ ವ್ಯಕ್ತಿಗಳಿಗೆ ಮುಂದಿನ ವರ್ಷ ಟಿಕೆಟ್ ಯಾವುದೇ ಕಾರಣಕ್ಕೂ ಸಿಗೋದಿಲ್ಲ. ಹ್ಯಾಟ್ರಿಕ್ ಹೀರೋ ಎನಿಸಿಕೊಂಡರ ಕ್ಷೇತ್ರಗಳೂ ಕೂಡ ಈ ಬಾರಿ ಬದಲಾಗಲಿದೆ. ಯಾವ ಕ್ಷೇತ್ರ, ಯಾರೆಲ್ಲಾ ಶಾಸಕರಿಗೆ ಶಾಕ್ ಎನ್ನುವುದರ ಕಂಪ್ಲೀಟ್ ಡೀಟೇಲ್ಸ್.

'ಬಿಜೆಪಿಯವರು ನಕಲಿ ಹಿಂದುತ್ವವಾದಿ, ಷಂಡರು, RSS ಸಂಸ್ಕಾರ ಕಲಿಸಿಕೊಟ್ಟಿಲ್ಲವೇ?'

ಕರ್ನಾಟಕ ಬಿಜೆಪಿ (Karnataka BJP) 150ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕು ಎನ್ನುವ ಹಠದಲ್ಲಿದೆ. ಅದಕ್ಕಾಗಿ ಈ ಬಾರಿ ಹೊಸ ಪ್ರಕ್ರಿಯೆಗಳನ್ನು ಮಾಡುವ ಮೂಲಕ ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎನ್ನುವ ತವಕದಲ್ಲಿದೆ.

Video Top Stories