Asianet Suvarna News Asianet Suvarna News

2023 ರ ಚುನಾವಣೆ: ಇನ್ಮುಂದೆ ಜೆಡಿಎಸ್‌ ಆಟ ಆರಂಭ ಎಂದು ಗುಡುಗಿದ ಎಚ್‌ಡಿಕೆ

- ಇನ್ಮುಂದೆ ಜೆಡಿಎಸ್‌ ಆಟ ಆರಂಭ: ಎಚ್‌ಡಿಕೆ

- ನಾವು ಈಗ ಕ್ವಾರಂಟೈನ್‌ನಿಂದ ಹೊರಬಂದಿದ್ದೇವೆ

- ಇನ್ನು ಮುಂದೆ ಜೆಡಿಎಸ್‌ ಏನೆಂಬುದನ್ನು ತೋರಿಸುತ್ತೇವೆ

 

ಬೆಂಗಳೂರು (ಜು. 03): 2023 ರ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ' ನಾವು ಈಗ ಕ್ವಾರಂಟೈನ್‌ನಿಂದ ಹೊರಗೆ ಬಂದಿದ್ದೇವೆ. ಇನ್ನು ಮುಂದೆ ಜೆಡಿಎಸ್‌ ಏನು ಎಂಬುದನ್ನು ತೋರಿಸುತ್ತೇವೆ ಎಂದು ಎಚ್‌ಡಿಕೆ ಹೇಳಿದ್ದಾರೆ. 

ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಚರ್ಚೆ: ಅಚ್ಚರಿ ಹೇಳಿಕೆ ಕೊಟ್ಟ ಜಮೀರ್ ಅಹ್ಮದ್

ಈಗ ನಮ್ಮ ಆಟ ಪ್ರಾರಂಭಿಸುತ್ತೇವೆ. ಇನ್ನು ಮುಂದೆ ನಮ್ಮ ಆಟ ಹೇಗಿರುತ್ತದೆ ಎನ್ನುವುದನ್ನು ನೋಡಬೇಕಾಗುತ್ತದೆ. ನಾನು ವಿಧಾನಸಭೆಗೆ ಹೋಗುವುದನ್ನು ನಿಲ್ಲಿಸಿದ್ದೆ. ಇದನ್ನು ಕಂಡು ಜೆಡಿಎಸ್‌ ಕಥೆ ಮುಗಿದೇ ಹೋಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಅಧಿವೇಶನ ಪ್ರಾರಂಭವಾಗಲಿ, ಇನ್ನು ಮುಂದೆ ನೋಡಿ. ಅಧಿವೇಶನಕ್ಕೆ ಹೋಗುತ್ತೇನೆ. ಚರ್ಚೆಗೆ ಬರಲಿ ಮಾತನಾಡುತ್ತೇನೆ. ಎಲ್ಲವನ್ನೂ ತೋರಿಸುತ್ತೇನೆ. ಜು.15ರಿಂದ ನನ್ನ ಕಾರ್ಯಕ್ರಮ ಏನು ಎನ್ನುವುದನ್ನು ತಿಳಿಸುತ್ತೇನೆ ಎಂದು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.