ಕುರುಕ್ಷೇತ್ರ ರಣಕಣದಲ್ಲಿ ರಂಗೇರಿದ ಬಜರಂಗಿ ಬಡಿದಾಟ..ರಾಜ್ಯಾದ್ಯಂತ ಮೊಳಗಿತು ಹನುಮಾನ್ ಚಾಲೀಸಾ..!
ರಾಜ್ಯದಲ್ಲಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್, ಪ್ರಚಾರದ ಭರದಲ್ಲಿ ಯಡವಟ್ಟು ಮಾಡಿಕೊಳ್ಳುತ್ತಲೇ ಇದೆ.ಬಜರಂಗದಳ ಬ್ಯಾನ್‌ಗೆ ಮುಂದಾಗಿರುವ ಕಾಂಗ್ರೆಸ್‌ನ ನಡೆಗೆ ವಿರೋಧ ವ್ಯಕ್ತವಾಗಿದೆ.
ರಾಜ್ಯದಲ್ಲಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್, ಪ್ರಚಾರದ ಭರದಲ್ಲಿ ಯಡವಟ್ಟು ಮಾಡಿಕೊಳ್ಳುತ್ತಲೇ ಇದೆ.ಬಜರಂಗದಳ ಬ್ಯಾನ್‌ಗೆ ಮುಂದಾಗಿರುವ ಕಾಂಗ್ರೆಸ್‌ನ ನಡೆಗೆ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿಯೂ ವಿವಾದವನ್ನು ಸೃಷ್ಟಿ ಮಾಡಿಕೊಂಡಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಬಜರಂಗದಳವನ್ನು ಬ್ಯಾನ್ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಇದಕ್ಕೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಿಂದೂ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದವು.ಬಜರಂಗದಳ ಬ್ಯಾನ್‌ಗೆ ಮುಂದಾಗಿರುವ ಕಾಂಗ್ರೆಸ್‌ನ ನಡೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯಾದ್ಯಂತ ಬಜರಂಗದಳ ಕಾರ್ಯಕರ್ತರು, ಹಿಂದೂ ಪರ ಸಂಘಟನೆಗಳು ಹಾಗೂ ಹನುಮಾನ್ ಭಕ್ತರುಗಳು ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸಿದರು. ಇನ್ನು ಬೀದರ್, ಬಾಲ್ಕಿಯಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು, ಹಾಗೇ ಕರಾವಳಿಯಲ್ಲಿ ಹನುಮಾನ ಚಾಲೀಸ ಮೊಳಗಿದೆ. ರಾಜ್ಯದ ಮೂಲೆ ಮೂಲೆಯಲ್ಲು ರಾಮಮಂದಿರಗಳಲ್ಲಿ ಹನುಮಾನ ಚಾಲೀಸಾ ಹೇಳಲಾಗಿದೆ.