ಹೆಗಲ ಮೇಲೆ ಕೈ.. ಮೊಗದಲ್ಲಿ ಮಂದಹಾಸ.. ಭರ್ಜರಿ ಪೋಸ್ ಹಿಂದಿದೆ ಅದ್ದೂರಿ ರಣತಂತ್ರ..!

 ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ  ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕ್ಕೊಂಡು, ಫೋಟೋ ತೆಗೆಸಿಕೊಂಡಿದ್ದಾರೆ.ನಗ್ ನಗ್ತಾ ಮಾತನಾಡುತ್ತ ಇರುವ ವಿಡಿಯೋ ವೈರಲ್ ಆಗಿದೆ.

First Published Apr 23, 2023, 3:37 PM IST | Last Updated Apr 23, 2023, 3:37 PM IST

 ಸರ್ಕಾರ ರಚಿಸುವ ದೊಡ್ಡ ಕನಸು ಹೊತ್ತಿರುವ  ಪಕ್ಷಗಳ ಪೈಕಿ, ಕಾಂಗ್ರೆಸ್ ಕೂಡ  ಪ್ರಮುಖವಾದ್ದು. ಆದರೆ ಕಾಂಗ್ರೆಸ್ ಒಳಗಿರು ಬಣ ರಾಜಕೀಯ.. ಆ ನಾಯಕರ ಮಧ್ಯೆ ಇರುವ ಅಸಮಾಧಾನ ಕಾಂಗ್ರೆಸ್‌ಗೆ ಶಾಪವಾಗಬಹುದು ಎನ್ನುವ  ಮಾತಿತ್ತು ಆ ಮಾತನ್ನೆಲ್ಲಾ ಸುಳ್ಳು ಎನ್ನಲು ಪ್ರೂ ಮಾಡೋಕೆ ಡಿಕೆ ಸಿದ್ದು ವಿಡಿಯೋ ವೈರಲ್ ಆಗುತ್ತಿದೆ.ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ  ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕ್ಕೊಂಡು, ಫೋಟೋ ತೆಗೆಸಿಕೊಂಡಿದ್ದಾರೆ.ನಗ್ ನಗ್ತಾ ಮಾತನಾಡುತ್ತ ಇರುವ ವಿಡಿಯೋ ವೈರಲ್ ಆಗಿದೆ.. ಈ ಮೂಲಕ, ಕಾಂಗ್ರೆಸ್ ಒಂದು ಸ್ಪಷ್ಟ ಸಂದೇಶವನ್ನ ಕೊಡೋ ಪ್ರಯತ್ನ ಮಾಡುತ್ತಿದೆ.  ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ, ಪ್ರಚಾರ, ಪಕ್ಷ ಸಂಘಟನೆ , ಹೀಗೆ ಯಾವುದೇ ವಿಷಯ ತಗೊಂಡರು ಆ ಎಲ್ಲಾ ಕಾರ್ಯಗಳಲ್ಲೂ ಈ ಇಬ್ಬರೂ ನಾಯಕರ ಪಾತ್ರ ಮಹತ್ವದ್ದಾಗಿರುತ್ತೆ.. ಇನ್ನು  ಸಿದ್ದು-ಡಿಕೆ ಅವರವರ ಕೆಲಸಾನಾ ಬೇರೆಯಾಗಿ ಮಾಡಿಕೊಂಡ್ರೆ, ಮತ್ತೆ  ಶಾಪವಾಗುವುದು, ಕಾಂಗ್ರೆಸ್‌ ಗೇ. ಹಾಗಾಗಿನೇ, ಈ ಇಬ್ಬರು ನಾಯಕರ ಮಧ್ಯೆ ಯಾವ ಭಿನ್ನಾಭಿಪ್ರಾಯ ಇಲ್ಲ ಎಂದು ಜನಕ್ಕೆ ಮನದಟ್ಟು ಮಾಡಿಸಲು ಈ ಫೋಟೋಗಳು ಹೊರಬಂದ ಹಾಗೆ ಕಾಣಿಸುತ್ತಿದೆ.

Video Top Stories