ಇಂದು ಚಿನ್ನದನಾಡಿಗೆ ಮೋದಿ ಭೇಟಿ, ಕೈ-ತೆನೆ ಕೋಟೆಯಲ್ಲಿ ಕಮಲ ಅರಳಿಸಲು ಕೇಸರಿ ತಂತ್ರ

ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಾವು ಜೋರಾಗಿದ್ದು,ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಹಲವು ತಂತ್ರ ಹಾಗೂ ಪ್ರತಿತಂತ್ರಗಳನ್ನ ನಡೆಸುತ್ತಿದೆ. ಬಿಜೆಪಿ ಹೈಕಮಾಂಡ್‌ ನಾಯಕರು ರಾಜ್ಯದಲ್ಲಿ ಪ್ರಚಾರವನ್ನ ನಡೆಸುತ್ತಿದ್ದು,ಇಂದು  ಪ್ರಧಾನಿ ನರೇಂದ್ರ ಮೋದಿ ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿಲಿದ್ದಾರೆ.

First Published Apr 30, 2023, 10:17 AM IST | Last Updated Apr 30, 2023, 3:48 PM IST

ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಾವು ಜೋರಾಗಿದ್ದು,ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಹಲವು ತಂತ್ರ ಹಾಗೂ ಪ್ರತಿತಂತ್ರಗಳನ್ನ ನಡೆಸುತ್ತಿದೆ. ಬಿಜೆಪಿ ಹೈಕಮಾಂಡ್‌ ನಾಯಕರು ರಾಜ್ಯದಲ್ಲಿ ಪ್ರಚಾರವನ್ನ ನಡೆಸುತ್ತಿದ್ದು,ಇಂದು  ಪ್ರಧಾನಿ ನರೇಂದ್ರ ಮೋದಿ ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿಲಿದ್ದಾರೆ.ಹೀಗಾಗಿ ಚಿನ್ನದನಾಡು ಬಯಲುಸೀಮೆ ಕೋಲಾರ ಜಿಲ್ಲೆಗೆ ಎರಡನೇ ಬಾರಿಗೆ ಭೇಟಿ ನೀಡಲಿದ್ದಾರೆ. ಇನ್ನು 2008 ರ ನಂತರ ಕೋಲಾರದಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆದ್ದಿಲ್ಲ ಹೀಗಾಗಿ ಸಂಘಟನೆ ಬಲಗೊಳಿಸುವ ಸಾಧ್ಯತೆ ಇದೆ. ಕೋಲಾರದಲ್ಲಿ ಕಲಮ ಅರಳಿಸಲು, ಕೆಜಿಎಫ್ ಚಿನ್ನದ ಗಣಿ ಪುನರಾರಂಭ, ಕೆಜಿಎಫ್ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಸೇರಿದಂತೆ ಮಹತ್ವದ ಘೋಷಣೆಯ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಮೂಲಕ ಕೋಲಾರ ಭಾಗದ ಜನರನ್ನು ಸೆಳೆಯುವ ಪ್ಲಾನ್ ಮಾಡಿದೆ ಬಿಜೆಪಿ. ಅದಲ್ಲದೆ ಕೋಲಾರ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಭರವಸೆ ನೀಡುವುದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಯುವ ಸಮುದಾಯವನ್ನ ಸೆಳೆಯುವ ಪ್ಲಾನ್‌ ಕೂಡಾ ನಡೆಸಿದೆ.