'ಬರ್ದಿಟ್ಕೊಳ್ಳಿ.. ಕಾಂಗ್ರೆಸ್‌ 140 ಸೀಟ್‌ ಗೆಲ್ದೆ ಇದ್ರೆ ನೋಡಿ... 'ಡಿಕೆ ಸುರೇಶ್‌ ಎಲೆಕ್ಷನ್‌ ವಿಶ್ವಾಸ!

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಡಿಕೆ ಸುರೇಶ್‌  ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  

First Published Apr 21, 2023, 5:46 PM IST | Last Updated Apr 21, 2023, 5:57 PM IST

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಡಿಕೆ ಸುರೇಶ್‌ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೂರಕ್ಕೂ ಹೆಚ್ಚು ಸ್ಥಾನವನ್ನು ಕಾಂಗ್ರೆಸ್‌ ಪಡೆಯುತ್ತದೆ. ಭರವಸೆಯ ಬಿಜೆಪಿಯ ಕನಸು ನುಚ್ಚು ನೂರಾಗಿದೆ, ಯುವಕರ ಭವಿಷ್ಯ ಅತಂತ್ರದಲ್ಲಿದೆ ರೈತರು ಕಂಗಾಲಾಗಿದ್ದಾರೆ , ಕಾರ್ಮಿಕ ಒಲಯ ಕಂಗೆಟ್ಟಿದೆ, ಉದ್ಯಮಿಗಳು ದೇಶ ಬಿಟ್ಟು ಹೋಗುವ  ಸಂದರ್ಭ ಬಂದಿದೆ  ಎಂದು ಹೇಳಿದರು. ಹಾಗೆ ಇದೆಲ್ಲದರ ಮಧ್ಯೆ ಹೊಸ ಹುರುಪಿನಿಂದ ಈ ಬಾರಿಯ ಚುನಾವಣೆಯನ್ನು ಜನ ಬಹಳಷ್ಟು ನೀರಿಕ್ಷೆಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ನತ್ತ ಮುಖ ಮಾಡುತ್ತಿದ್ದಾರೆ ಎಂದು ತಿಳಿಸಿದರು . ಇನ್ನು ಈ ಬಾರಿ ಬಿಜೆಪಿಯಿಂದ ಜನರ ಹೃದಯ ಒಡೆದಿದೆ ಅದಕ್ಕಾಗಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಎಂದರು. ಹಾಗೇ ಅಖಂಡ ಶ್ರೀನಿವಾಸಗೆ ಟಿಕೆಟ್‌ ಸಿಗದೆ ಇರಲು ಸಂಬಂಧಿಸಿದಂತೆ ಮೌಲಿಗಳು ಇಲ್ಲಿ ಬರುವುದಿಲ್ಲ ಜಾತ್ಯಾತೀತ ತತ್ವಗಳ ಮೌಲ್ಯವನ್ನು ಎತ್ತಿಹಿಡಿಯುವುದು ಕಾಂಗ್ರೆಸ್‌ ಪಕ್ಷದ ಕರ್ತವ್ಯ ಎಲ್ಲರನ್ನು ಸಮಾನರಾಗಿ ಕಾಣಬೇಕಾಗಿದ್ದು ಭಾರತೀಯ ಸಂಸ್ಕೃತಿ ಎಂದು ಹೇಳಿದರು  

Video Top Stories