ಪದ್ಮನಾಭನಗರ ರಣ ಕಣ, ಆರ್‌ ಅಶೋಕ್‌ ವಿರುದ್ದ ಡಿಕೆ ಸುರೇಶ್‌ ಕಣಕ್ಕೆ..?

ಬಿಜೆಪಿ ರಾಜಕೀಯ ತಂತ್ರಕ್ಕೆ ಡಿಕೆ ಶಿವಕುಮಾರ್ ಠಕ್ಕರ್ ಕೊಟ್ಟಿದ್ದು,ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆರ್ ಅಶೋಕ್ ವಿರುದ್ಧ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಲಿದ್ದಾರೆ. 
 

First Published Apr 19, 2023, 3:39 PM IST | Last Updated Apr 19, 2023, 3:39 PM IST

ಬಿಜೆಪಿ ರಾಜಕೀಯ ತಂತ್ರಕ್ಕೆ ಡಿಕೆ ಶಿವಕುಮಾರ್ ಠಕ್ಕರ್ ಕೊಟ್ಟಿದ್ದು,ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆರ್ ಅಶೋಕ್ ವಿರುದ್ಧ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಅಂತಿಮವಾಗಿ ಯಾರು ಕಣದಲ್ಲಿ ಉಳಿಯುತ್ತಾರೆ ಎನ್ನುವುದು ಹೈಕಮಾಂಡ್ ನಿರ್ಧಾರದ ಬಳಿಕ ತಿಳಿಯಲಿದೆ ಎಂದು ಹೇಳಿದ್ದಾರೆ. ಇನ್ನು ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಕಂದಾಯ ಸಚಿವ ಆರ್ ಅಶೋಕ್  ಕಣಕ್ಕಿಳಿಸುವ ಮೂಲಕ ಬಿಜೆಪಿ ಸಂಚಲನ ಸೃಷ್ಟಿಸಿತ್ತು ಈಗ ಡಿಕೆಶಿ  ಪದ್ಮನಾಭನಗರದಲ್ಲಿ ಡಿಕೆ ಸುರೇಶ್ ಕಣಕ್ಕಿಳಿಸುವ ಮೂಲಕ ಟಕ್ಕರ್‌ ನೀಡಿದ್ದಾರೆ. ಈ ತಂತ್ರಗಾರಿಕೆಯಿಂದ ಅಶೋಕ್ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದು  ಕಷ್ಟಕರವಾಗಿ ಪರಿಣಮಿಸಬಹುದಾಗಿದೆ. ಪದ್ಮನಾಭ ನಗರ ಅವರ ಸ್ವಂತ ಕ್ಷೇತ್ರವಾಗಿದ್ದು,  ಹತೋಟಿಯಿದೆ. ಆದರೆ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ನಿಂತಿರುವುದರಿಂದ ಅಲ್ಲಿಯೂ  ಪ್ರಚಾರವನ್ನು ನೋಡಿಕೊಳ್ಳಬೇಕಿದೆ, ಮತಯಾಚನೆ ಮಾಡಬೇಕಿದೆ.
 

Video Top Stories