ಕೈಗೆ ಶೆಟ್ಟರ್, ಸವದಿ ಅಸ್ತ್ರ..ಬಿಜೆಪಿಗೆ ಸಿದ್ದು ಮಾತೇ ಬ್ರಹ್ಮಾಸ್ತ್ರ..!

ಹಳಿ ತಪ್ಪಿದ ಮಾತುಗಳಿಂದ ಸದಾ  ವಿವಾದಗಳಿಗೆ ಗುರಿಯಾಗುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಚುನಾವಣೆ ಹೊಸ್ತಿಲಲ್ಲಿ ಕುರುಕ್ಷೇತ್ರಕ್ಕೇ ಟ್ವಿಸ್ಟ್ ಕೊಡುವ  ಮಾತನ್ನು ಆಡಿದ್ದಾರೆ.  ಇದನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡು ಬಿಟ್ಟಿದೆ. 
 

First Published Apr 25, 2023, 10:50 AM IST | Last Updated Apr 25, 2023, 10:50 AM IST

ಹಳಿ ತಪ್ಪಿದ ಮಾತುಗಳಿಂದ ಸದಾ  ವಿವಾದಗಳಿಗೆ ಗುರಿಯಾಗುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಚುನಾವಣೆ ಹೊಸ್ತಿಲಲ್ಲಿ ಕುರುಕ್ಷೇತ್ರಕ್ಕೇ ಟ್ವಿಸ್ಟ್ ಕೊಡುವ  ಮಾತನ್ನು ಆಡಿದ್ದಾರೆ. ಕಾಂಗ್ರೆಸ್ ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಿಸಲಿ ಎನ್ನುವ ಬಿಜೆಪಿ ಸವಾಲಿಗೆ ಉತ್ತರಿಸುತ್ತಾ, ಸಿದ್ದು ಆಡಿದ ಮಾತು ಚುನಾವಣಾ ರಣಭೂಮಿಯಲ್ಲಿ ಇನ್ನಿಲ್ಲದ ಸಂಚಲನ ಎಬ್ಬಿಸಿದೆ. ಇನ್ನು ಇದನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡು ಬಿಟ್ಟಿದೆ. ಶೆಟ್ಟರ್-ಸವದಿ ಪಕ್ಷಾಂತರವನ್ನೇ ಮುಂದಿಟ್ಟಕೊಂಡು ಬಿಜೆಪಿಗೆ ಪಂಚ್ ಕೊಟ್ಟಿದ್ದ ಕಾಂಗ್ರೆಸ್ ವಿರುದ್ಧ ಸಿದ್ದು ಮಾತನ್ನೇ ಬ್ರಹ್ಮಾಸ್ತ್ರವಾಗಿ ಪ್ರಯೋಗಿಸುತ್ತಿದೆ ಕೇಸರಿ ಪಡೆ.ಸಿದ್ದರಾಮಯ್ಯ ಮಾತೇ ವರುಣಾದಲ್ಲಿ ಅವ್ರ ಸೋಲಿಗೆ ಕಾರಣವಾಗಲಿದೆ ಅಂತ ವೀರಶೈವ-ಲಿಂಗಾಯತ ಸಮುದಾಯದ  ಮಾಸ್ ಲೀಡರ್ ಯಡಿಯೂರಪ್ಪ ಹೇಳಿದರೆ, ಲಿಂಗಾಯತ ಅಸ್ತ್ರವನ್ನು ದಯಪಾಲಿಸಿರೋದಕ್ಕೆ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಅಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.ಚುನಾವಣೆಗೆ ಉಳಿದಿರೋದಿನ್ನೂ ಕೆಲವೇ ದಿನ ಅಷ್ಟೇ. ಇಂಥಾ ಹೊತ್ತಲ್ಲಿ ಇಂಥಾ ಅಸ್ತ್ರ ಸಿಕ್ಕಿದ್ರೆ ಯಾರಾದ್ರೂ ಬಿಡ್ತಾರಾ..? ಅದ್ರಲ್ಲೂ ಬಿಜೆಪಿ ನಾಯಕರೂ ಬಿಡೋದುಂಟಾ..?  ಹೀಗಿರೋವಾಗ ವಿರೋಧ ಪಕ್ಷದ ನಾಯಕನೇ ತಮ್ಮ ಕೈಯಾರೆ ಅಸ್ತ್ರವೊಂದನ್ನು ಕೊಟ್ಟಾಗ ಕೇಸರಿ ಕಲಿಗಳು ಸುಮ್ಮನ್ನಿರುವ ಮಾತೆಲ್ಲಿ..? 
 

Video Top Stories