ಚುನಾವಣೆ ಹೊಸ್ತಿಲಲ್ಲಿ ವಾಸ್ತು ಮೊರೆ ಹೋದ ಕಾಂಗ್ರೆಸ್‌, ಮೆಟ್ಟಿಲುಗಳ ಸಂಖ್ಯೆ ಹೆಚ್ಚಳ!

ಚುನಾವಣೆಯ ಹೊಸ್ತಿಲಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್‌ ವಾಸ್ತು ಮೊರೆ ಹೋಗಿದೆ. ಸಮಸಂಖ್ಯೆಯಲ್ಲಿದ್ದ ಮೆಟ್ಟಿಲುಗಳ ಸಂಖ್ಯೆಯನ್ನ ಹೆಚ್ಚು ಮಾಡಿ ಬೆಸಸಂಖ್ಯೆ ಮೆಟ್ಟಿಲುಗಳನ್ನು ಮಾಡಿದೆ!
 

First Published Dec 14, 2022, 6:09 PM IST | Last Updated Dec 14, 2022, 6:09 PM IST

ಮಂಗಳೂರು (ಡಿ.14): ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಇರುವಾಗಲೇ ಕಾಂಗ್ರೆಸ್‌ ಪಕ್ಷ ವಾಸ್ತು ಮೊರೆ ಹೋಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸಮಸಂಖ್ಯೆಯಲ್ಲಿದ್ದ ಮೆಟ್ಟಿಲುಗಳ ಸಂಖ್ಯೆಯನ್ನು ಬೆಸಸಂಖ್ಯೆಗೆ ಏರಿಸಲಾಗಿದೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯನ್ನು ನವೀಕರಣ ಮಾಡಲಾಗುತ್ತಿದೆ. ಇಲ್ಲಿಯವರೆಗೆ 8 ಮೆಟ್ಟಿಲುಗಳಿದ್ದ ಕಚೇರಿಯಲ್ಲೀಗ ವಾಸ್ತುತಜ್ಞರ ಸಲಹೆಯಂತೆ 9 ಸಂಖ್ಯೆಗೆ ಏರಿಸಲಾಗಿದೆ. ವಾಸ್ತು ಪ್ರಕಾರ 8 ಮೆಟ್ಟಿಲುಗಳಿದ್ದರೆ ದೋಷ ಎನ್ನುವ ಕಾರಣಕ್ಕಾಗಿ ಈ ಬದಲಾವಣೆ ಮಾಡಲಾಗಿದೆ.

2016ರಲ್ಲಿ ಈ ಜಿಲ್ಲಾ ಕಚೇರಿಯನ್ನು ಉದ್ಘಾಟನೆ ಮಾಡಲಾಗಿತ್ತು. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲು ಕಂಡಿತ್ತು. 2019ರಲ್ಲಿ ಇಲ್ಲಿ ನಡೆದ 8 ವಿಧಾನಸಭೆ ಸ್ಥಾನಗಳ ಪೈಕಿ 7ರಲ್ಲಿ ಪಕ್ಷ ಸೋಲು ಕಂಡಿತ್ತು.
 

Video Top Stories