ಜಗದೀಶ್ ಶೆಟ್ಟರ್ ವಿರುದ್ಧ ಸೋತಿದ್ದ ಬೊಮ್ಮಾಯಿಗೆ ಮುಖ್ಯಮಂತ್ರಿ ಹುದ್ದೆ: ಶೆಟ್ಟರ್‌ಗೆ ಗೇಟ್‌ ಪಾಸ್

ಜಗದೀಶ್‌ ಶೆಟ್ಟರ್ 1994ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಅವರ ವಿರುದ್ಧ ಸ್ಪರ್ಧಿಸಿ ಸೋತ ಬಸವರಾಜ ಬೊಮ್ಮಾಯಿ ಈಗ ಬಿಜೆಪಿಯನ್ನು ಸೇರಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ.

First Published Apr 17, 2023, 11:16 PM IST | Last Updated Apr 17, 2023, 11:17 PM IST

ಬೆಂಗಳೂರು (ಏ.17): ಜಗದೀಶ್‌ ಶೆಟ್ಟರ್ ಅವರು ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. 1994ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಅವರ ವಿರುದ್ಧ ಸ್ವತಃ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸಿ ಸೋತವರು ಈಗ ಬಿಜೆಪಿಯನ್ನು ಸೇರಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ.

ಇನ್ನು ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಿದ್ದ ಶೆಟ್ಟರ್‌ ಕೂಡ ಶಾಸಕ, ವಿಧಾನ ಸಭೆ ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ, ಸ್ಪೀಕರ್, ಹಲವು ಬಾರಿ ಸಚಿವರಾಗಿ, ಮುಖ್ಯಮಂತ್ರಿಯೂ ಆಗಿದ್ದಾರೆ. ಈಗ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಇನ್ನು ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗುವ ಮೂಲಕ ಜನರ ದೃಷ್ಟಿಕೋನದಲ್ಲಿ ಬಿಜೆಪಿಗೆ ಹಿನ್ಡೆಯಾಗಿದೆ. ಇನ್ನು ಬಿಜೆಪಿಯಿಂದ ಮುಖ್ಯಮಂತ್ರಿ ಆಗಿದ್ದ ಜಗದೀಶ್‌ ಶೆಟ್ಟರ್‌ ಹಾಗೂ ಉಪಮುಖ್ಯಮಂತ್ರಿ ಆಗಿದ್ದ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಈ ಬಗ್ಗೆ ಸ್ವತಃ ಯಡಿಯೂರಪ್ಪ ಅವರು ಛೀಮಾರಿ ಹಾಕಿದರು. ಆದರೆ, ಅವರಿಗೆ ತಿರುಗೇಟು ನೀಡಿದ ಸವದಿ ಮತ್ತು ಶೆಟ್ಟರ್‌ ಅವರು ಕೆಜಿಪಿ ಕಟ್ಟುವಾಗ ನಿಮಗೆ ಬಿಜೆಪಿ ಏನು ಕಡಿಮೆ ಮಾಡಿತ್ತು ಎಂದು ತಿರುಗೇಟು ನೀಡಿದ್ದಾರೆ.

Video Top Stories