Asianet Suvarna News Asianet Suvarna News

ಮುಸ್ಲಿಮ್ ಆಯಿತು, ಇದೀಗ ದಲಿತ ಸಿಎಂ ದಾಳ ಉರುಳಿಸಿದ ಕುಮಾರಸ್ವಾಮಿ!

ಜೆಎನ್‌ಯುನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹ,  ಬಿಜೆಪಿಯಲ್ಲಿ ಟಿಕೆಟ್ ಟೆನ್ಶನ್, ಹಿರಿಯರಿಗೆ ಕೊಕ್? ಕಾಂಗ್ರೆಸ್‌ನಲ್ಲಿ 4 ಸಮೀಕ್ಷೆ, ಅಭ್ಯರ್ಥಿ ಆಯ್ಕೆ ಕಗ್ಗಂಟು ಸೇರಿದಂತೆ ಇಂದಿನ ಕಂಪ್ಲೀಟ್ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಇತ್ತೀಚೆಗೆ ಹೆಚ್‌ಡಿ ಕುಮಾರಸ್ವಾಮಿ ಮುಸ್ಲಿಮ್ ಮುಖ್ಯಮಂತ್ರಿ ಮಾಡುತ್ತೇವೆ ಎಂದಿದ್ದರು. ಇದೀಗ ದಲಿತ ಮುಖ್ಯಮಂತ್ರಿ ದಾಳವನ್ನು ಕುಮಾರಸ್ವಾಮಿ ಉರುಳಿಸಿದ್ದಾರೆ. ಇದೇ ವೇಳೆ ಎಲ್ಲರಿಗೂ ಅವಕಾಶ ಮುಕ್ತವಾಗಿದೆ ಎಂದಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ತಯಾರಿಯಲ್ಲಿರುವ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ಕಾರಣ ಹಿಂದುತ್ವದ ಹೆಸರಿನಲ್ಲಿ ಪ್ರಮೋದ್ ಮುತಾಲಿಕ್ ಹಾಗೂ ಅವರ ಬೆಂಬಲಿಗರು ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. 6 ಕ್ಷೇತ್ರದಲ್ಲಿ ಮುತಾಲಿಕ್ ಹಾಗೂ ಬೆಂಬಲಿಗರು ಸ್ಪರ್ಧಿಸಲು ತಯಾರಿ ಶುರುವಾಗಿದೆ.ಕಾಂಗ್ರೆಸ್ ನಾಯಕರು ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 4 ಸರ್ವೆಗಳನ್ನು ಮಾಡಿ ವರದಿ ತರಿಸಿಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಕಾಂಗ್ರೆಸ್, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಸಮೀಕ್ಷೆ ಮಾಡಿಸಿದ್ದಾರೆ. ಇದೀಗ ಕಾಂಗ್ರೆಸ್‌ನಲ್ಲಿ ಡಿಕೆ ಹಾಗೂ ಸಿದ್ದು ಗುದ್ದಾಟ ಆರಂಭಗೊಂಡಿದೆ ಅನ್ನೋ ಮಾತುಗಳ ಬಲವಾಗುತ್ತಿದೆ.