ನನ್ನ ವೋಟು ನನ್ನ ಮಾತು: ಬಾಗಲಕೋಟೆ ಮತದಾರರ ಮೂಡ್ ಹೇಗಿದೆ ಗೊತ್ತಾ?
ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಬಾಗಲಕೋಟೆ ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಬಾಗಲಕೋಟೆ (ಮಾ.03): ಚುನಾವಣೆ ಸಮೀಪಿಸಿದೆ. ಒಂದು ಕಡೆ ರಾಜಕಾರಣಿಗಳು, ಬೆಂಬಲಿಗರು, ಕಾರ್ಯಕರ್ತರು ಫುಲ್ ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲಾವನ್ನೂ ಕೂತು ಗಮನಿಸ್ತಿದ್ದಾರೆ. ಸುವರ್ಣ ನ್ಯೂಸ್ 'ನನ್ನ ವೋಟು ನನ್ನ ಮಾತು' ವಿಶೇಷ ಕಾರ್ಯಕ್ರಮದಡಿ ಬಾಗಲಕೋಟೆ ಮತದಾರರು ಮಾತನಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಬಿಜೆಪಿಗೆ ಬೆಂಬಲ ನೀಡುತ್ತಿದ್ದು, ಬೊಮ್ಮಾಯಿ ಅವರು ಸಿಎಂ ಆಗಬೇಕೆಂದು ಬಯಸುತ್ತೇನೆ. ಅಲ್ಲದೇ ಈಗಿನ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಮತದಾರರೊಬ್ಬರು ತಿಳಿಸಿದರು. ಅಲ್ಲದೇ ಮತ್ತೊಬ್ಬ ಮತದಾರರೊಬ್ಬರು ಮುಂದಿನ ಬಾರಿ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹೇಳಿದರು. ಸಿದ್ದರಾಮಯ್ಯರಿಗೆ ಬಡವರ ಬಗ್ಗೆ ಕಾಳಜಿ ಇದ್ದು, ಬೊಮ್ಮಾಯಿ ಅವರ ಸರ್ಕಾರ ಪರ್ಸಟೆಂಜ್ ಸರ್ಕಾರ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.