Asianet Suvarna News Asianet Suvarna News

ಚುನಾವಣೆಗೂ ಮುನ್ನ ಇವಿಎಂ ರಾಜಕಾರಣ: ಗುಜರಾತ್‌, ಯುಪಿಯಲ್ಲಿ ಬಳಸಿದ ಇವಿಎಂ ಬೇಡ ಎಂದ ಕಾಂಗ್ರೆಸ್‌!

ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಲಹೆ, ಅಭಿಪ್ರಾಯ ಮತ್ತು ದೂರುಗಳನ್ನು ಪಡೆಯಲು ಸಂವಾದ ನಡೆಸಿದೆ. 

First Published Mar 10, 2023, 1:50 PM IST | Last Updated Mar 10, 2023, 1:50 PM IST

ಕರ್ನಾಟಕ ಕುರುಕ್ಷೇತ್ರ ಮೂಹೂರ್ತಕ್ಕೆ ಕೌಂಟ್‌ಡೌನ್‌  ಆರಂಭವಾಗಿದೆ, ಈ ಮಧ್ಯೆ ಚುನಾವಣಾ ಆಯೋಗದ ಮೇಲೆಯೇ ಕಾಂಗ್ರೆಸ್‌ಗೆ ಅನುಮಾನ ಉಂಟಾಗಿದೆ . ಚುನಾವಣಾ ಆಯೋಗದ ಅಧಿಕಾರಿಗಳ ತಂಡ  ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಅವರ ಸಲಹೆ, ಅಭಿಪ್ರಾಯ ಮತ್ತು ದೂರುಗಳನ್ನು ಪಡೆಯಲು ಸಂವಾದ ನಡೆಸಿದೆ. ಈ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗದಲ್ಲಿ ಬಿಜೆಪಿ ಏಜೆಂಟರಿದ್ದಾರೆ, RSS ಶಾಖೆಗೆ ಹೋಗುವ ಅಧಿಕಾರಿಗಳು ಇದ್ದಾರೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ ದೂರು ನೀಡಿದೆ.  ಹಾಗೆ ಬಿಜೆಪಿ ಗೆದ್ದ ರಾಜ್ಯಗಳ EVM ಕರ್ನಾಟಕದಲ್ಲಿ ಬಳಸಬೇಡಿ. ಉತ್ತರ ಪ್ರದೇಶ, ಗುಜರಾತ್‌ನಲ್ಲಿದ್ದ ಮತಯಂತ್ರ ಬೇಡ, ಪೊಲೀಸ್‌ ಮಹಾನಿರ್ದೇಶಕರು ಬಿಜೆಪಿ ಪರ ಕೆಲಸ ಮಾಡ್ತಿದ್ದಾರೆ. ರಾಜ್ಯದಲ್ಲಿ ತಕ್ಷಣವೇ ಚುನಾವಣೆ ಘೋಷಣೆ ಮಾಡಬೇಕು ನೀತಿ ಸಂಹಿತೆ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್‌ ಹಲವಾರು ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿದೆ.