ಪದತ್ಯಾಗದ ಸುಳಿವು ಕೊಟ್ರಾ, ಹೊಸ ದಾಳ ಉರುಳಿಸಿದ್ರಾ? ಕುರ್ಚಿ ಸಂಘರ್ಷದ ಹೊತ್ತಲ್ಲಿ ತ್ಯಾಗದ ಮಾತಾಡಿದ್ದೇಕೆ ಸಿದ್ದು?
ಸೋನಿಯಾ ತ್ಯಾಗದ ಅಧ್ಯಾಯ ನೆನಪಿಸಿದ್ದೇಕೆ ಸಿಎಂ ಸಿದ್ದು? ಸಿದ್ದರಾಮಯ್ಯ ಬಾಯಲ್ಲಿ ತ್ಯಾಗದ ಮಾತು. ಏನಿದರ ಗುಟ್ಟು? ಕುರ್ಚಿ ಸಂಘರ್ಷದ ಹೊತ್ತಲ್ಲಿ ತ್ಯಾಗದ ಮಾತಾಡಿದ್ದೇಕೆ ಮುಖ್ಯಮಂತ್ರಿ?
ಸಿದ್ದರಾಮಯ್ಯನವರನ್ನು ಅನ್ನರಾಮಯ್ಯ, ಕರ್ಣರಾಮಯ್ಯ, ಸಮರರಾಮಯ್ಯ, ನೀತಿರಾಮಯ್ಯ, ಅರ್ಥರಾಮಯ್ಯ ಹೀಗೆ ನಾನಾ ಹೆಸರುಗಳಿಂದ ಕರೀತಾರೆ. ಒಬ್ಬ ವ್ಯಕ್ತಿ, ಹತ್ತಾರು ಹೆಸರು, ಈ ಹೆಸರಿಗೀಗ ಮತ್ತೊಂದು ನಾಮಬಲ ಸೇರಿಕೊಂಡಿದೆ. ಅದೇ ತ್ಯಾಗರಾಮಯ್ಯ.
ಅರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತ್ಯಾಗರಾಮಯ್ಯನಾಗಿದ್ದು ಯಾವಾಗ? ಏನಿದು ತ್ಯಾಗಸಿದ್ಧರಾಮ ರಹಸ್ಯ? ಕಾಂಗ್ರೆಸ್ ಕೋಟೆಯೊಳಗೆ ಕಿಚ್ಚೆಬ್ಬಿಸಿರೋ ಆ ತ್ಯಾಗದ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ಇವತ್ತಿನ ಈ ಸ್ಪೆಷಲ್ ಎಪಿಸೋಡ್'ನಲ್ಲಿ ತೋರಿಸ್ತೀವಿ ನೋಡಿ.