Asianet Suvarna News Asianet Suvarna News

ಬಿಜೆಪಿ ಸರ್ಕಾರಕ್ಕೆ 3ನೇ ಮುಖ್ಯಮಂತ್ರಿ ಬರೋದು ಪಕ್ಕಾನಾ?: 3ನೇ ಸಿಎಂ ಗುಮ್ಮ ಶುರುವಾಗಿದ್ದೆಲ್ಲಿ?

ಸಿಎಂ ಬದಲಾವಣೆಯ ಸ್ಫೋಟಕ ಸುದ್ದಿ ಎದ್ದು ಬಂದದ್ದು ಎಲ್ಲಿಂದ..? 3ನೇ ಸಿಎಂ ಗುಮ್ಮನ ಸೃಷ್ಠಿಕರ್ತನ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಜರುಗಿಸುತ್ತಾ.? ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಏನ್ ಹೇಳ್ತಾರೆ..? 

Aug 11, 2022, 5:55 PM IST

ಬೆಂಗಳೂರು, (ಆಗಸ್ಟ್,12): ರಾಜ್ಯ ರಾಜಕಾರಣದಲ್ಲಿ ಮತ್ತೆ ಭುಗಿಲೆದ್ದು ನಿಂತ ಮುಖ್ಯಮಂತ್ರಿ ಬದಲಾವಣೆ ಬಿರುಗಾಳಿ.. ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ.. ಬದ್ಲಾಗ್ತಾರಾ ಸಿಎಂ..? ಕಾಂಗ್ರೆಸ್ ಕೋಟೆಯಿಂದ ಸಿಡಿದ ಟ್ವೀಟ್ ಅಸ್ತ್ರಕ್ಕೆ ಕಮಲಕಲಿಗಳು ಕೆಂಡ ಕೆಂಡ.. 

ಕೈ-ಕಮಲ ಮಧ್ಯೆ ‘ಸಿಎಂ ಬದಲಾವಣೆ’ ಸಂಘರ್ಷ: 2ನೇ ದಿನವೂ ಕಾಂಗ್ರೆಸ್ ಸರಣಿ ಟ್ವೀಟಾಸ್ತ್ರ

ಅಷ್ಟಕ್ಕೂ ಸಿಎಂ ಬದಲಾವಣೆಯ ಸ್ಫೋಟಕ ಸುದ್ದಿ ಎದ್ದು ಬಂದದ್ದು ಎಲ್ಲಿಂದ..? ಯಾರು ಇದರ ಅಸಲಿ ಸೃಷ್ಠಿಕರ್ತ..? ಉರಿಯೋ ಬೆಂಕಿಗೆ ತುಪ್ಪ ಸುರಿದದ್ದು ಆ ಕೇಸರಿ ಕಲಿನಾ..? ಬಿಜೆಪಿ ಸರ್ಕಾರದಲ್ಲಿ ಮತ್ತೊಮ್ಮೆ 3ನೇ ಸಿಎಂ ಬರೋದು ಪಕ್ಕಾನಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 3ನೇ ಸಿಎಂ ಗುಮ್ಮ..!