Asianet Suvarna News Asianet Suvarna News

ಪಕ್ಷದಲ್ಲಿ ನನಗೆ ಗಾಡ್ ಫಾದರ್ ಇಲ್ಲ, ಕೆಲಸ ನೋಡಿ ಅವಕಾಶ ಕೊಡುವ ನಿರೀಕ್ಷೆ ಇದೆ: ಗೂಳಿಹಟ್ಟಿ

Aug 3, 2021, 1:48 PM IST

ಬೆಂಗಳೂರು (ಆ. 03): ಸಂಪುಟ ವಿಸ್ತರಣೆ ಬಗ್ಗೆ ನಾವು ಯಾರ ಬಳಿಯೂ ಚರ್ಚೆ ಮಾಡಿಲ್ಲ. ಕ್ಷೇತ್ರದಲ್ಲೇ ಇದ್ದು ಕೆಲಸ ಮಾಡುತ್ತಿದ್ದೇವೆ. ನಾವು ಯಾವುದೇ ಲಾಬಿ ಮಾಡಿಲ್ಲ. ಬೊಮ್ಮಾಯಿಯವರನ್ನು ಸಹಜವಾಗಿ ಭೇಟಿ ಮಾಡಿ ವಿಶ್ ಮಾಡಿದ್ದೇವೆ ಅಷ್ಟೇ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. 

ಸಿಎಂ ಮಾಡಲಿಲ್ಲ, ಮಂತ್ರಿಗಿರಿಯಾದರೂ ಕೊಡ್ರಿ, ವರಿಷ್ಠರ ಮುಂದೆ ಬೆಲ್ಲದ್ ಅಳಲು..!

'ಪಕ್ಷದಲ್ಲಿ ನನಗೆ ಗಾಡ್ ಫಾದರ್ ಇಲ್ಲ. ನಮ್ಮ ಕೆಲಸ ನಿಷ್ಠೆ, ಪ್ರಾದೇಶಿಕತೆ ಎಲ್ಲಾ ನೋಡಿ ಗುರುತಿಸುತ್ತಾರೆ. ಉತ್ತಮವಾಗಿ ಕೆಲಸ ಮಾಡುವವರಿಗೆ ನಮ್ಮಲ್ಲಿ ಅವಕಾಶ ಕೊಡ್ತಾರೆ. ಅ ರೀತಿ ಮಾಡಿದರೆ ನನಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ' ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.