Asianet Suvarna News Asianet Suvarna News

ಸಂಪುಟ ಸರ್ಕಸ್: ಕಾರಜೋಳ ಅಥವಾ ಲಿಂಬಾವಳಿಗೆ ಡಿಸಿಎಂ ಹುದ್ದೆ..?

Aug 3, 2021, 11:06 AM IST

ಬೆಂಗಳೂರು (ಆ. 03): ಮುಂಬರುವ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಪ್ರಾತಿನಿಧ್ಯ ನೀಡಲು ನಿರ್ಧರಿಸಿರುವ ಆಡಳಿತಾರೂಢ ಬಿಜೆಪಿ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೊಸ ಸಂಪುಟದಲ್ಲೂ ಈ ವರ್ಗಗಳಿಗೆ ಪ್ರಾಶಸ್ತ್ಯ ನೀಡುವ ಸಾಧ್ಯತೆಯಿದೆ.

ಹೈಕಮಾಂಡ್ ಜೊತೆ ಇನ್ನೊಂದು ಸುತ್ತಿನ ಮಾತುಕತೆ, ಇಂದೇ ಸಂಪುಟ ಕ್ಲೈಮ್ಯಾಕ್ಸ್ ಸಾಧ್ಯತೆ

ಈ ಕಾರಣಕ್ಕಾಗಿಯೇ ಉಪಮುಖ್ಯಮಂತ್ರಿಯಾಗಿದ್ದ ದಲಿತ ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳ ಅವರನ್ನು ಮತ್ತೆ ಮುಂದುವರೆಸುವ ಸಾಧ್ಯತೆ ಇದೆ. ಒಂದು ವೇಳೆ ಅವರನ್ನು ಕೈಬಿಟ್ಟರೂ ದಲಿತ ಸಮುದಾಯದ ಅರವಿಂದ ಲಿಂಬಾವಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಂಭವವಿದೆ.