Asianet Suvarna News Asianet Suvarna News

ಪಕ್ಷಾಂತರ ಪರ್ವ: ಫಲಿಸದ ಕತ್ತಿ ವರಸೆ, ಕಾಗೆ ಕಾಂಗ್ರೆಸ್‌ಗೆ ವಲಸೆ..!

Nov 14, 2019, 8:54 PM IST

ಬೆಂಗಳೂರು (ಅ.14): ಉಪಚುನಾವಣೆಗಾಗಿ ಅತ್ತ ಅನರ್ಹ ಶಾಸಕರು ಬಿಜೆಪಿ ಸೇರ್ಪಡನೆಯಾಗುತ್ತಿದ್ದಂತೆ ಕಮಲ ಪಾಳೆಯದಲ್ಲಿ ಟಿಕೆಟ್​ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಪೋಟವಾಗಿದೆ. 

ಅತ್ತ ಬಿಜೆಪಿ ಅನರ್ಹರಿಗೆ ಪಕ್ಷ ಟಿಕೆಟ್​ಘೋಷಿಸಿದ್ದಂತೆ ಇತ್ತ ಕಾಗೆ ಕಾಂಗ್ರೆಸ್ ತೆಕ್ಕೆಗೆ ಬಿತ್ತು. ಕಾಗವಾಡ ಕ್ಷೇತ್ರದ  ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾದ್ದ ರಾಜು ಕಾಗೆಯನ್ನು ಕೈಬಿಟ್ಟು ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಅವರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. 

ಇದ್ರಿಂದ ರಾಜು ಕಾಗೆ ಅಧಿಕೃತವಾಗಿ ಇಂದು [ಗುರುವಾರ] ಕಾಂಗ್ರೆಸ್ ಸೇರಿದರು. ಕೊನೆಗಳಿಗೆಯಲ್ಲಿ ರಾಜು ಕಾಗೆ ಅವರನ್ನು ಸಮಾಧಾನಪಡಿಸಲು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅಖಾಡಕ್ಕಿಳಿದಿದ್ದರು. ಆದ್ರೆ ಅದಕ್ಕೆ ಕಾಗೆ ಬಗ್ಗಲಿಲ್ಲ.