Asianet Suvarna News Asianet Suvarna News

ಸಿಂ'ಹಾಸನ' ಟಿಕೆಟ್ ಕಗ್ಗಂಟು.. ಫ್ಯಾಮಿಲಿ ಫೈಟ್‌ಗೆ ಬ್ರೇಕ್ ಯಾವಾಗ..?

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಆದರು ಇನ್ನು ಹಾಸನದ ಜೆಡಿಎಸ್ ಟಿಕೆಟ್ ಫೈಟ್ ಮಾತ್ರ ಇನ್ನೂ ನಿಂತಿಲ್ಲ.ದೊಡ್ಡಗೌಡರ ಕುಟುಂಬದ ಟಿಕೆಟ್ ಫೈಟ್ ಈಗ ಫೈನಲ್ ಹಂತಕ್ಕೆ ಬಂದು ತಲುಪಿದೆ.
 

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಆದರು ಇನ್ನು ಹಾಸನದ ಜೆಡಿಎಸ್ ಟಿಕೆಟ್ ಫೈಟ್ ಮಾತ್ರ ಇನ್ನೂ ನಿಂತಿಲ್ಲ.ದೊಡ್ಡಗೌಡರ ಕುಟುಂಬದ ಟಿಕೆಟ್ ಫೈಟ್ ಈಗ ಫೈನಲ್ ಹಂತಕ್ಕೆ ಬಂದು ತಲುಪಿದೆ. ಆದ್ರೂ ಸಹ ಕುಟುಂಬದೊಳಗಿನ ಟಿಕೆಟ್ ಫೈಟ್ ಇನ್ನೂ ನಿಂತಂತೆ ಕಾಣುತ್ತಿಲ್ಲ. ದೊಡ್ಡ ಗೌಡರಿಂದಲೂ ಈ ಸಮಸ್ಯೆ ಗಂಟು ಬಿಡಿಸೋದಕ್ಕೆ ಆಗಿಲ್ಲ. ಒಂದು ಕಡೆ ಕುಮಾರಸ್ವಾಮಿ ಭವಾನಿ ರೇವಣ್ಣಗೆ ಟಿಕೆಟ್ ಕೊಡೋದಕ್ಕೆ ಒಪ್ಪುತ್ತಿಲ್ಲ. ಇನ್ನು ಹಾಸನ ಜನಾಭಿಪ್ರಾಯ ಸ್ವರೂಪ್‌ಗೆ ಇದ್ದು, ಹಾಸದಲ್ಲಿ ಸ್ವರೂಪ್ ಗೆದ್ದೇ ಗೆಲ್ತಾರೆ, ಹೀಗಾಗಿ ಅವ್ರಿಗೆ ಟಿಕೆಟ್ ಕೊಡೋದೆಂಬ ಪಟ್ಟು ಹಿಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಇಷ್ಟಕ್ಕೂ ಏನಾಗಲಿದೆ ಹಾಸನ ರಾಜಕಾರಣ? ಕೊನೆಗೆ ಯಾರು ಸೋಲಲಿದ್ದಾರೆ? ಹಾಸನದಲ್ಲಿ ಯಾರು ಸ್ಪರ್ಧಿಸಲಿದ್ದಾರೆ? ಈ ವಿಡಿಯೋ ನೋಡಿ