ಸಿದ್ದುಗೆ ಗುದ್ದು.. ಭವಾನಿ ಬಂಡಾಯಕ್ಕೆ ಕುಮಾರಣ್ಣನ ಮದ್ದು..!

ಕೋಲಾರದಲ್ಲಿ ಸಿದ್ದರಾಮಯ್ಯ ಉರುಳಿಸಿದ್ದ ದಾಳ ತಿರುಗಿ ಬಿದ್ದಿದೆ. ಹಾಸನದಲ್ಲಿ ರೇವಣ್ಣ ಫ್ಯಾಮಿಲಿಗೆ ದಳಪತಿ ಕುಮಾರಸ್ವಾಮಿ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಭವಾನಿ ರೇವಣ್ಣಗೆ ಹಾಸನ ಟಿಕೆಟ್ ಕೊಡಲು ಎಚ್‌ಡಿಕೆ ನಿರಾಕರಿಸಿದ್ದೇಕೆ..? ಸಿದ್ದರಾಮಯ್ಯ ಡಬಲ್ ಓಟಕ್ಕೆ ಬ್ರೇಕ್ ಹಾಕಿದ್ದೇಕೆ ಕಾಂಗ್ರೆಸ್ ಹೈಕಮಾಂಡ್..? 

First Published Apr 16, 2023, 3:19 PM IST | Last Updated Apr 16, 2023, 3:19 PM IST

 ಹಾಸನ ಟಿಕೆಟ್ ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ, ಮೈದುನನ ಮಾತಿಗೆ ಮಣಿದಿದ್ದಾರೆ. ಹಿಡಿದ ಪಟ್ಟನ್ನು ಬಿಡದೆ ತಮ್ಮ ಅತ್ಯಾಪ್ತನಿಗೆ ಟಿಕೆಟ್ ಕೊಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ ಹಾಸನ ಟಿಕೆಟ್ ಕೈ ತಪ್ಪಿರೋದ್ರಿಂದ ಜೆಡಿಎಸ್ ಅಭ್ಯರ್ಥಿ ಪರ ಭವಾನಿ ರೇವಣ್ಣ ಕೆಲಸ ಮಾಡ್ತಾರಾ..? ಈ ಬಗ್ಗೆ ಸ್ವರೂಪ್ ಪ್ರಕಾಶ್ ಹೇಳೋದೇನು..? ಇನ್ನು ಕೋಲಾರದಲ್ಲಿ ಗೆದ್ದರಾಮಯ್ಯನಾಗಲು ಹೊರಟಿದ್ದ ಸಿದ್ದರಾಮಯ್ಯ ,ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಿದ್ದರಾಮಯ್ಯನವರ ಲೆಕ್ಕಾಚಾರ ತಲೆ ಕೆಳಗಾಗಿದೆ. ಬಿದ್ದರಾಮಯ್ಯನಾಗಿದ್ದಾರೆ.  ಸಿದ್ದರಾಮಯ್ಯಗೆ ತಪ್ಪಿದ್ದು ಹೇಗೆ ಕೋಲಾರ ರಣಕ್ಷೇತ್ರ..?ತಿರುಗಿ ಬಿದ್ದದ್ದೇಕೆ ವರುಣಾರಾಮಯ್ಯನ ಕೋಲಾರ ದಾಳ..!? ಈ ವಿಡಿಯೋ ನೋಡಿ 

Video Top Stories