ಡಿಸೈಡ್ ಆಗದ 'ಕೈ' ವಿವಿಐಪಿ ಕ್ಷೇತ್ರ..ಹೈಕಮಾಂಡ್ ಒಲವು ಯಾವ ಕ್ಷೇತ್ರದಲ್ಲಿ ಯಾರ ಕಡೆಗೆ..?
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.ಇನ್ನು ಕಾಂಗ್ರೆಸ್ ಪಕ್ಷ ತನ್ನ ಸೇನಾನಿಗಳ ಪಟ್ಟಿಯಲ್ಲಿದ್ದ 166 ಹೆಸರನ್ನ ಘೋಷಿಸಿದೆ. ಆದರೆ ಕೌತುಕ ಉಳಿಸಿಕೊಂಡಿರೋದು ಮಾತ್ರ, ಗುಟ್ಟು ಬಿಟ್ಟುಕೊಡದ ಕ್ಷೇತ್ರಗಳು.
ಕಾಂಗ್ರೆಸ್ ಪಕ್ಷ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್ ಮಾಡಿದೆ. 2ನೇ ಪಟ್ಟಿಯಲ್ಲಿ ಕೆಲವು ಕ್ಷೇತ್ರಗಳು, ಹಾಗೂ ಅಭ್ಯರ್ಥಿಗಳು ಅಚ್ಚರಿ ಮೂಡಿಸಿದ್ದು,ಈ ಪಟ್ಟಿಯಲ್ಲೇ ಇಲ್ಲದ ಉಳಿದ ಕ್ಷೇತ್ರಗಳು ಮಹದಚ್ಚರಿಗೆ ಕಾರಣವಾಗಿದಾವೆ.. ಇದೆಲ್ಲವೂ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರದ ನಡೆಯೋ, ಅಥವಾ ಮುಂದಾಗಲಿರೋ ವಿಸ್ಮಯಕ್ಕೆ ಮುನ್ನುಡಿಯೋ ಅನ್ನೋ ಹಾಗೆ ಜನ ಮಾತಾಡುವಂತಾಗಿದೆ. ಇನ್ನು ಕಾಂಗ್ರೆಸ್ ಮೊದಲ ಬಾರಿಗೆ ಒಟ್ಟು 224 ಕ್ಷೇತ್ರಗಳ ಪೈಕಿ, 124 ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಮಾಡಿತ್ತು. ಆ ಪಟ್ಟಿ ನೋಡಿ ರೊಚ್ಚಿಗೆದ್ದವರು ಕಡಿಮೆ. ಆದರೆ ಈ ಎರಡನೇ ಪಟ್ಟಿಬಂಡಾಯದ ಬಿರುಗಾಳಿಗೆ ಮೆಲ್ಲಗೆ ಪ್ರೋತ್ಸಾಹ ಕೊಟ್ಟಂತಾಗಿದೆ. ಅದಲ್ಲದೆ ಕಾಂಗ್ರೆಸ್ ಇನ್ನೂ ಟಿಕೆಟ್ ಘೋಷಿಸದ ಕ್ಷೇತ್ರ ಕಾಂಗ್ರೆಸ್ ಒಳಗೊಂದು ಅಂತರ್ಯುದ್ಧಕ್ಕೆ ಕಾರಣವಾಗುತ್ತ ಎನ್ನುವ ಅನುಮಾನ ಹುಟ್ಟುಹಾಕಿದೆ.