Asianet Suvarna News Asianet Suvarna News

ನಾನು ಸಚಿವಾಕಾಂಕ್ಷಿಯಲ್ಲ, ಸ್ಥಾನ ಕೇಳುವುದು ಸರಿಯಲ್ಲ: ಜ್ಯೋತಿ ಗಣೇಶ್

Aug 2, 2021, 5:22 PM IST

ಬೆಂಗಳೂರು (ಆ. 02): ಯಡಿಯೂರಪ್ಪ ನೇತೃತ್ವದಲ್ಲಿ, ಮೋದಿಯವರ ಮಾರ್ಗದರ್ಶನದಲ್ಲಿ ಬಿಜೆಪಿಯಿಂದ ನಾವು ಗೆದ್ದು ಬಂದವರು. ನಾವು ಈಗ ಕಣ್ಣು ಬಿಡುತ್ತಿದ್ದೇವೆ. ಸಚಿವ ಸ್ಥಾನ ಕೇಳುವುದು ಸಮಂಜಸವಲ್ಲ. ಪಕ್ಷದ ಕಾರ್ಯಕರ್ತರು, ಬೆಂಬಲಿಗರು ನಮಗೆ ಸ್ಥಾನ ಕೊಡುವಂತೆ ಒತ್ತಾಯಪಡಿಸಿದ್ದಾರೆ. ಇದು ಸರಿಯಲ್ಲ ಎಂದು ತುಮಕೂರು ಶಾಸಕ ಜ್ಯೋತಿ ಗಣೇಶ್ ಹೇಳಿದ್ಧಾರೆ. 

'ಮಂತ್ರಿಯಾಗಿದ್ದವರನ್ನು ಮತ್ತೆ ಸಚಿವರನ್ನಾಗಿ ಮಾಡಬೇಡಿ, ನಮಗೂ ಅವಕಾಶ ಕೊಡಿ'

'ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಜನ ಶ್ರಮಿಸಿದ್ದಾರೆ. ಅವರ ಮುಂದೆ ನಾವು ಈಗ ತಾನೇ ಕಣ್ಣು ಬಿಡುತ್ತಿದ್ದೇವೆ. ನಮಗಿಂತ ಹಿರಿಯರಿದ್ದಾರೆ. ನಾನು ಸಚಿವಾಕಾಂಕ್ಷಿಯಲ್ಲ' ಎಂದು ಜ್ಯೋತಿ ಪ್ರಕಾಶ್ ಹೇಳಿದ್ಧಾರೆ.