ರಿಸಲ್ಟ್‌ಗೂ ಮುನ್ನ ಸೋಲೋಪ್ಪಿಕೊಂಡ್ರಾ MTB?:ಕೈ ಬಿಡಬೇಡಿ ಎಂದು BSYಗೆ ಮನವಿ..!
ಹೊಸಕೋಟೆ ಬಿಜೆಪಿ ಅಭ್ಯರ್ಥಿ 'ಅನರ್ಹ' ಎಂಟಿಬಿ ನಾಗರಾಜ್ ಉಪಚುನಾವಣೆ ಮುಗಿದ ಬಳಿಕ ಇಂದು (ಶನಿವಾರ)) ಬೆಳ್ಳಂಬೆಳಿಗ್ಗೆ ಡಾಲರ್ಸ್ ಕಾಲೋನಿಯಲ್ಲಿನ ಸಿಎಂ ನಿವಾಸಕ್ಕೆ ಭೇಟಿ ದೌಡಾಯಿಸಿದ್ದಾರೆ.
ಬೆಂಗಳೂರು, (ಡಿ. 07): ಹೊಸಕೋಟೆ ಬಿಜೆಪಿ ಅಭ್ಯರ್ಥಿ 'ಅನರ್ಹ' ಎಂಟಿಬಿ ನಾಗರಾಜ್ ಉಪಚುನಾವಣೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಇಂದು (ಶನಿವಾರ)) ಬೆಳ್ಳಂಬೆಳಿಗ್ಗೆ ಡಾಲರ್ಸ್ ಕಾಲೋನಿಯಲ್ಲಿನ ಸಿಎಂ ನಿವಾಸಕ್ಕೆ ಭೇಟಿ ದೌಡಾಯಿಸಿದ್ದಾರೆ.
ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದು, ಸುಮಾರು ಮುಕ್ಕಾಲು ಗಂಟೆಗಳ ಕಾಲ ಸೋಲು ಗೆಲುವಿನ ಲೆಕ್ಕಾಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸಂಸದ ಬಚ್ಚೇಗೌಡ ಅವರು ಬಿಜೆಪಿ ಪರ ಪ್ರಚಾರ ಮಾಡದಿರುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಚ್ಚೇಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರು ಎಂಟಿಬಿ ನಾಗರಾಜ್ ಪರ ಪ್ರಚಾರ ಮಾಡಲಿಲ್ಲ.
ಬದಲಿಗೆ ವಿರೋಧಿ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಇದರ ಬಗ್ಗೆ ಎಂಟಿಬಿ ನಾಗರಾಜ್ ಇಂದು ಸಿಎಂ ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಎಂಟಿಬಿಗೆ ಸೋಲಿನ ಭೀತಿ ಎದುರಾಗಿದೆಯೋ ಏನೋ..? ಅದಕ್ಕೆ ಯಡಿಯೂರಪ್ಪಗೆ ಮಹತ್ವದ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಏನದು ಮನವಿ..? ಭೇಟಿ ಬಳಿಕ ಎಂಟಿಬಿ ಹೇಳಿದ್ದೇನು..? ವಿಡಿಯೋನಲ್ಲಿ ನೋಡಿ....