Asianet Suvarna News Asianet Suvarna News

'ತೇಜಸ್ವಿನಿಯವರು ಬಂದರೆ ಸ್ವಾಗತ, ವಿಜೇತಾ ಸಹೋದರಿ ಸಮಾನ'

* ಜೆಡಿಎಸ್ ಶಕ್ತಿಶಾಲಿ; ಅನಂತ್ ಕುಮಾರ್ ಪುತ್ರಿ ಟ್ವೀಟ್
* ತೇಜಸ್ವಿನಿಯವರು ಜೆಡಿಎಸ್‌ಗೆ ಬಂದರೆ ಸ್ವಾಗತ
* ನಮ್ಮ ಕಾರ್ಯಕರ್ತರ ಪರವಾಗಿ ಧನ್ಯವಾದ
* ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

First Published Jul 29, 2021, 5:19 PM IST | Last Updated Jul 29, 2021, 5:19 PM IST

ಬೆಂಗಳೂರು(ಜು.  29)  'ಕರ್ನಾಟಕದ ರಾಜಕೀಯ ನಿಜವಾಗಿಯೂ ಆಸಕ್ತಿದಾಯಕವಾಗಿದೆಯೇ.. ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿಯೇ ಇದೆ'  ಎಂದು ದಿವಗಂತ ಅನಂತ್ ಕುಮಾರ್ ಪುತ್ರಿ ವಿಜೇತಾ ಮಾಡಿದ್ದ ಟ್ವೀಟ್ ಗೆ ಮಾಜಿ ಸಿಎಂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಬೊಮ್ಮಾಯಿ ಬಿಜೆಪಿಯಲ್ಲಿದ್ದರೂ ಜನತಾ ಪರಿವಾರದವರೆ

ಅನಂತ್ ಕುಮಾರ್ ಪುತ್ರಿಯವರ ಹೇಳಿಕೆಗೆ ನಾನು ಅಭಿನಂದನೆ ಸಲ್ಲಿಸಿದ್ದೇನೆ ನಮ್ಮ ಪಕ್ಷ ಇಲ್ಲವೇ ಇಲ್ಲ ಅಂತ ಹೇಳುವವರಿಗೆ ಆ ಸಹೋದರಿ ಹೇಳಿರುವುದು ಸರಿಯಾಗಿದೆ. ಅವರಿಗೆ ನನ್ನ ಧನ್ಯವಾದಗಳು. ಅವರು ನನಗೆ ಸಹೋದರಿ ಸಮಾನರು ಎಂದು ಹೇಳಿದ್ದಾರೆ.