Asianet Suvarna News Asianet Suvarna News

ಹಣ ಬಿಡುಗಡೆಗೆ ಅನುಮತಿ ಕೊಟ್ಟಿದ್ದು ನನ್ನ ಸರ್ಕಾರ; ಸಿದ್ದುಗೆ ಎಚ್‌ಡಿಕೆ ಟಾಂಗ್!

ಸಂಪುಟ ವಿಸ್ತರಣೆಯಲ್ಲಿ ಗೊಂದಲ ಇರೋದು ಗಮನಿಸಿದ್ದೇನೆ. ನಾನು ಬಿಜೆಪಿಯ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಸಮಸ್ಯೆ ಸರಿಪಡಿಸಿಕೊಳ್ಳುವ ವಿಚಾರ ಬಿಜೆಪಿಗೆ ಬಿಟ್ಟಿದ್ದು. ಸಮಸ್ಯೆ ಸರಿಪಡಿಸಿಕೊಳ್ಳುವ ವಿಚಾರ ಬಿಜೆಪಿಗೆ ಬಿಟ್ಟದ್ದು ಎಂದು ಎಚ್‌ಡಿಕೆ ಹೇಳಿದ್ದಾರೆ. 

ಬೆಂಗಳೂರು (ಫೆ. 07): 'ಸಂಪುಟ ವಿಸ್ತರಣೆಯಲ್ಲಿ ಗೊಂದಲ ಇರೋದು ಗಮನಿಸಿದ್ದೇನೆ. ನಾನು ಬಿಜೆಪಿಯ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಸಮಸ್ಯೆ ಸರಿಪಡಿಸಿಕೊಳ್ಳುವ ವಿಚಾರ ಬಿಜೆಪಿಗೆ ಬಿಟ್ಟಿದ್ದು. ಸಮಸ್ಯೆ ಸರಿಪಡಿಸಿಕೊಳ್ಳುವ ವಿಚಾರ ಬಿಜೆಪಿಗೆ ಬಿಟ್ಟದ್ದು' ಎಂದು ಎಚ್‌ಡಿಕೆ ಹೇಳಿದ್ದಾರೆ. 

‘ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಎಂದೂ ಒಂದಾಗಿಲ್ಲ’

ಕೇವಲ 14 ತಿಂಗಳಲ್ಲಿ ಕಾಂಗ್ರೆಸ್ ಶಾಸಕರ ವಿಧಾನಸಭಾ ಕ್ಷೇತ್ರಗಳ ಅಬೀವೃದ್ಧಿಗೆ 19 ಸಾವಿರ ಕೋಟಿ ಅನುದಾನವನ್ನು ಕೊಟ್ಟಿದ್ದೇನೆ. ಇವತ್ತು ಬಿಜೆಪಿ ಸರ್ಕಾರ ಏನು ಮಾಡಿದೆ? ಇವತ್ತು ಯಡಿಯೂರಪ್ಪ ಮೇಲೆ ಅನುಕಂಪ ವ್ಯಕ್ತಪಡಿಸುತ್ತಾರೆ. ನಾನು 14 ತಿಂಗಳು ಅನುಭವಿಸಿದ ಹಿಂಸೆಗೆ ಅನುಕಂಪ ವ್ಯಕ್ತಪಡಿಸಿದ್ದು ನೋಡಿಲ್ಲ ನಾನು' ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದರು.