Asianet Suvarna News Asianet Suvarna News

ನಾನು ಪ್ರಚಾರ ಮಾಡದೇ ಇದ್ದರೆ ಸಿದ್ದರಾಮಯ್ಯ ಕತೆ ಬೇರೆಯಾಗುತ್ತಿತ್ತು, ಹೆಚ್‌ಡಿಕೆ!

ವಿವೇಕ ಶಾಲೆಗಳಲ್ಲಿ ವಿವೇಕಾನಂದರ ಫೋಟೋ, ಮತ್ತೆ ವಿವಾದ, ಮೈಸೂರಿನ ಗುಂಬಜ್ ಬಸ್ ನಿಲ್ದಾಣದ ವಿರೋಧಿಸಿ ಪ್ರತಿಭಟನೆ, ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟಕ್ಕೆ ಬಿಜೆಪಿ ವ್ಯಂಗ್ಯ, ಕಡೂರು, ತರಿಕೆರಿ, ಸೊರಬದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
 

Nov 15, 2022, 10:34 PM IST

ಸಿದ್ದರಾಮಯ್ಯ ಇದುವರೆಗೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅನ್ನೋದು ಇನ್ನೂ ಗೊಂದಲದಲ್ಲಿದೆ.  ಕೋಲಾರ ಕ್ಷೇತ್ರದತ್ತ ಒಲವು ತೋರಿದ ಸಿದ್ದುಗೆ ಗೆಲುವು ಸಿಗಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಸಿದ್ದರಾಮಯ್ಯ ಕೆರಳಿಸಿದೆ. ಸಿದ್ದುಗೆ ಎರಡು ಬಾರಿ ಪುನರ್ಜನ್ಮ ನೀಡಿದ್ದೇನೆ. ಕೊನೆಯ ಬಾರಿಗೆ ಬಾದಮಿ ಕ್ಷೇತ್ರದಲ್ಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಅಂತಿಮ ಎರಡು ದಿನ ಪ್ರಚಾರ ಮಾಡದೇ ಇದ್ದರೆ, ಸಿದ್ದರಾಮಯ್ಯ ಸೋಲುತ್ತಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.