ಕೈ ವಿರುದ್ಧ ಕುಸ್ತಿ, ದಳ ಕಮಲ ದೋಸ್ತಿ, ಕುಮಾರ ಕಂಠೀರವನಿಗಾಗಿ ಗೌಡರ ಮೆಗಾ ಪ್ಲ್ಯಾನ್..!

ರಾಜಕೀಯ ಪಟ್ಟು ಹಾಕೊದ್ರಲ್ಲಿ ದೇವೇಗೌಡ್ರು ಎತ್ತಿದ ಕೈ. ಗೌಡ್ರ ಲೆಕ್ಕಾಚಾರ ಅಂದ್ರೆ ಪಕ್ಕಾ ಇರತ್ತೆ ಅಂತಾನೇ ಅರ್ಥ. ಇದೀಗ ಕುಮಾರ ಕಂಠೀರವನಿಗೆ ಹೆಚ್ಚಿನ ಜವಾಬ್ದಾರಿ ಕೊಡುವ ಬಗ್ಗೆ ಮಾತನಾಡಿದ್ದಾರೆ. 

First Published Dec 27, 2020, 4:43 PM IST | Last Updated Dec 27, 2020, 4:58 PM IST

ಬೆಂಗಳೂರು (ಡಿ. 27): ರಾಜಕೀಯ ಪಟ್ಟು ಹಾಕೊದ್ರಲ್ಲಿ ದೇವೇಗೌಡ್ರು ಎತ್ತಿದ ಕೈ. ಗೌಡ್ರ ಲೆಕ್ಕಾಚಾರ ಅಂದ್ರೆ ಪಕ್ಕಾ ಇರತ್ತೆ ಅಂತಾನೇ ಅರ್ಥ. ಇದೀಗ ಕುಮಾರ ಕಂಠೀರವನಿಗೆ ಹೆಚ್ಚಿನ ಜವಾಬ್ದಾರಿ ಕೊಡುವ ಬಗ್ಗೆ ಮಾತನಾಡಿದ್ದಾರೆ.  ಸಂಕ್ರಾಂತಿ ಹಬ್ಬದ ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷವನ್ನು ಸಂಘಟಿಸಿ ಬಲಗೊಳಿಸುವ ವಿಚಾರದಲ್ಲಿ ಮತ್ತಷ್ಟುಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗುವುದು ಎಂದಿದ್ದಾರೆ. 

ತಮ್ಮ ಮೇಲಿನ ಆರೋಪಕ್ಕೆಲ್ಲಾ ಸ್ಪಷ್ಟ ಉತ್ತರ ಕೊಟ್ಟ ಹೇಮಂತ್ ನಿಂಬಾಳ್ಕರ್

ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್‌ ಇದೆ. ಆದರೆ, ನಮ್ಮಲ್ಲಿ ಯಾವ ಹೈಕಮಾಂಡ್‌ ಇಲ್ಲ. ಹಾಗಂತ ಪಕ್ಷದಲ್ಲಿ ಕುಮಾರಸ್ವಾಮಿ ಒಬ್ಬರದೇ ಅಂತಿಮ ನಿರ್ಧಾರ ಅಂತೇನೂ ಇಲ್ಲ. ನಾನು ರಾಷ್ಟ್ರೀಯ ಅಧ್ಯಕ್ಷನಿದ್ದೇನೆ. ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು ಸಹ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಯಾರು ಕೆಲಸ ಮಾಡುತ್ತಾರೋ ಅಂತಹವರಿಗೆ ಜವಾಬ್ದಾರಿಗಳನ್ನು ವಹಿಸಲಾಗುವುದು. ಯಾವುದೇ ಪಕ್ಷವು ಜನರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಜನರಿಗೂ ಪಕ್ಷದ ಬದ್ಧತೆಯ ಬಗ್ಗೆ ತಿಳಿಹೇಳಬೇಕು ಎಂದಿದ್ದಾರೆ.