'ಸತೀಶ್ ಕುತಂತ್ರ ಮಾಡಿದ, ಲಖನ್ ಬೆನ್ನಿಗೆ ಚೂರಿ ಹಾಕಿದ'
15, Nov 2019, 5:44 PM IST
ಬೆಳಗಾವಿ, [ನ.15]: ರಾಜ್ಯದಲ್ಲಿ ಒಂದು ಕಡೆ ಉಪಚುನಾವಣೆ ರಂಗೇರುತ್ತಿದ್ರೆ, ಮತ್ತೊಂದೆಡೆ ನಾಯಕ ಮಾತಿನ ಸಮರ ತಾರಕ್ಕೇರುತ್ತಿದೆ. ಅದರಲ್ಲೂ ಗೋಕಾಕ್ ವಿಧಾನಸಭಾ ಉಪಚುನಾವಣೆಯಲ್ಲಿ ಸಹೋದರರ ಸವಾಲ್ ಏರ್ಪಟ್ಟಿದೆ.
ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಅಖಾಡಕ್ಕಿಳಿದ್ರೆ, ಸಹೋದರ ಲಖನ್ ಜಾರಕಿಹೊಳಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿರುವುದು ಭಾರೀ ಕುತೂಹಲ ಮೂಡಿಸಿದೆ. ಅದರಲ್ಲೂ ಜಾರಕಿಹೊಳಿ ಬ್ರದರ್ಸ್ ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದಾರೆ.
ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.