Asianet Suvarna News Asianet Suvarna News

ಸಂಪುಟ ರಚನೆ ಕಸರತ್ತು: ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ

Aug 2, 2021, 3:25 PM IST

ಬೆಂಗಳೂರು (ಆ. 02): ರಾಜ್ಯದಲ್ಲಿ ಸಂಪುಟ ರಚನೆ ಕಸರತ್ತು ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಇಂದು ಸಂಜೆ ನಡ್ಡಾರನ್ನು ಭೇಟಿಯಾಗಲಿದ್ದಾರೆ. ಇಂದೇ ಕ್ಲೈಮ್ಯಾಕ್ಸ್  ಸಿಗುವ ಸಾಧ್ಯತೆ ಇದೆ. 

ಸಚಿವ ಸಂಪುಟ ರಚನೆಗೆ ರೆಡಿಯಾಯ್ತು 3 ಸೂತ್ರ, ಸಂಭಾವ್ಯ ಪಟ್ಟಿ ಹೀಗಿದೆ

'ಸಂಪುಟದಲ್ಲಿ ಯುವಕರು, ಹಿರಿಯರಿಗೆ ಆದ್ಯತೆ ನೀಡಲಾಗುತ್ತದೆ. ಹಿರಿತನದ ಅನುಭವ ಬಳಸಿಕೊಳ್ಳುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು. ಶಾಸಕನಾಗಿ ಪಕ್ಷದ ಸಂಘಟನೆಗೆ ನಮ್ಮನ್ನು ಬಳಸಿಕೊಳ್ಳಬಹುದು. ಸಂಪುಟ ಸೇರ್ಪಡೆ ಭಗವಂತನಿಗೆ ಬಿಟ್ಟಿದ್ದು ಎಂದು ಶಿವಮೊಗ್ಗದಲ್ಲಿ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.